ಬೆಂಗಳೂರು : ಸಿಲಿಕಾನ ಸಿಟಿಯ ಜನ ನಿರಂತರ ಮಳೆಯಿಂದಾಗಿ ಬೆಸತ್ತು ಹೋಗಿದ್ದಾರೆ.
ನಗರದಲ್ಲಿ ತಗ್ಗದ ವರುಣಾರ್ಭಟಕ್ಕೆ ಗುರುವಾರ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡಿದ್ದಾರೆ.
ಮಂಜು ಹಾಗೂ ಮೋಡ ಮುಸುಕಿದ ವಾತಾವರಣವಿತ್ತು.
ಮಧ್ಯಾಹ್ನದ ವೇಳೆಗೆ ಕೆಲವೆಡೆ, ಸಂಜೆಯ ನಂತರ ಅನೇಕ ಪ್ರದೇಶಗಳಲ್ಲಿ ಮಳೆಯಾಗಿದೆ.
ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಬಳಿ 30.5 ಹಾಗೂ ಬೆಟ್ಟಹಲಸೂರಿನಲ್ಲಿ 30.5 ಮಿ.ಮೀ, ನಾಗರಬಾವಿಯಲ್ಲಿ 30, ಹೆಸರಘಟ್ಟದಲ್ಲಿ 28.50, ಮಾರುತಿ ಮಂದಿರದಲ್ಲಿ 28, ಉತ್ತನಹಳ್ಳಿಯಲ್ಲಿ 27, ಹಂಪಿನಗರದಲ್ಲಿ 26.5, ಸೊನ್ನಪ್ಪನಹಳ್ಳಿಯಲ್ಲಿ 26, ಆರ್.ಆರ್.ನಗರದಲ್ಲಿ 24.5, ಜ್ಞಾನಭಾರತಿ ಕ್ಯಾಂಪಸ್ ನಲ್ಲಿ 23.5,
ಕಾಡುಗೋಡಿಯಲ್ಲಿ 23.5, ವಿ.ವಿಪುರಂನಲ್ಲಿ 20.5, ಯಲಹಂಕ ಚೌಡೇಶ್ವರಿ ವಾರ್ಡ್ನಲ್ಲಿ 20, ವಿದ್ಯಾಪೀಠದಲ್ಲಿ 22, ಅಟ್ಟೂರಲ್ಲಿ 21, ಯಲಹಂಕದಲ್ಲಿ 19, ಜಕ್ಕೂರಲಲಿ 19, ಬಿಟಿಎಂ ಲೇಔಟ್ ನಲ್ಲಿ 19.5, ಲಾಲ್ ಬಾಗ್ ನಲ್ಲಿ 18.5, ಸೀಗೆಹಳ್ಳಿಯಲ್ಲಿ 18.5, ಪಟ್ಟಾಭಿರಾಮನಗರದಲ್ಲಿ 18.5, ದೊಮ್ಮಲೂರು ಹಾಗೂ ಹೊಯ್ಸಳನಗರದಲ್ಲಿ 17, ಕೋರಮಂಗಲದಲ್ಲಿ 15, ಎಚ್ಎಸ್ಆರ್ ಲೇಔಟ್ ನಲ್ಲಿ 15 ಮಿ.ಮೀ.ಮಳೆಯಾಗಿದೆ.
ದೊಡ್ಡಜಾಲ, ಚಿಕ್ಕಜಾಲ, ಹೂಡಿ, ಗರುಡಾಚಾರ್ಪಾಳ್ಯ, ಬಸವನಗುಡಿ, ಚಾಮರಾಜಪೇಟೆ, ಸಾರಕ್ಕಿ, ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ 10 ಮಿಲಿ ಮೀಟರ್ಗೂ ಅಧಿಕ ಮಳೆ ಸುರಿದಿದೆ.
ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಆಗಾಗ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
PublicNext
23/10/2020 07:59 am