ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎಲ್ಲಿಲ್ಲದ ತೊಂದರೆಗಳು ಶುರುವಾಗಿದೆ.
ಬೆಂಗಳೂರು ನಗರದಲ್ಲಿ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ನಗರಕ್ಕೆ ನಗರವೇ ಸ್ಥಬ್ದವಾಗಿ ಹೋಗಿದೆ ಹಲವು ರಸ್ತೆಗಳು ಜಲಾವೃತಗೊಂಡಿವೆ ಜನಜೀವನದ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಲ್ಲತ್ತಹಳ್ಳಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ಲೇಔಟ್, ಗೋವಿಂದರಾಜನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡು ಅಕ್ಷರಶಃ ದ್ವೀಪದಂತಾಗಿದ್ದವು.
ಮನೆಗಳಿಗೆ ನೀರು ನುಗ್ಗಿ, ಬೈಕು ಹಾಗೂ ಕಾರು ನೀರಿನಲ್ಲಿ ಮುಳುಗಡೆಯಾಗಿದ್ದವು.
ಹಲವಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡಿದರು.
ಮಂಗಳವಾರ ದಿನವಿಡೀ ಮೋಡ ಕವಿದ ವಾತಾವರಣವಿದ್ದು ಸಂಜೆಯಿಂದ ಶುರುವಾದ ಧಾರಾಕಾರ ಮಳೆ ತಡರಾತ್ರಿವರೆಗೆ ಸುರಿಯಿತು.
ನಗರದ ದಕ್ಷಿಣ, ಪಶ್ಚಿಮ ಮತ್ತು ಆರ್.ಆರ್.ನಗರ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಮಲ್ಲತ್ತಹಳ್ಳಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ಲೇಔಟ್, ಗೋವಿಂದರಾಜನಗರ, ಶಂಕರಪ್ಪ ಲೇಔಟ್, ಬಿಇಎಂಎಲ್ ಮೂರನೇ ಹಂತ ಸೇರಿದಂತೆ ವಿವಿಧ ಭಾಗದ 40ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
ಹೀಗೆ ನಗರದಾದ್ಯಂತ ಅಪಾರ ಹಾನಿ ಮಾಡಿದೆ ಈ ಮಳೆ.
PublicNext
21/10/2020 10:31 am