ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲಂಗಾಣದಲ್ಲಿ ಮಳೆಯ ರುದ್ರನರ್ತನ : ನೀರಿನಲ್ಲಿ , ಕೊಚ್ಚಿ ಹೋದ ವಾಹನಗಳು

ಹೈದರಾಬಾದ್ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ತಗ್ಗು ಪ್ರದೇಶಗಳಿಗೆ ಪ್ರವೇಶಿಸುತ್ತಿದ್ದಂತೆ ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಈಗಾಗಲೆ ಹವಾಮಾನ ಇಲಾಖೆ ತೆಲಂಗಾಣ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ರಾಜ್ಯದಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ಸೋಮವಾರ ಹಾಗೂ ಮಂಗಳವಾರ ಹೈದರಾಬಾದ್ ಹಾಗೂ ತೆಲಂಗಾಣದ ಇತರ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದಂತೆ ವಾಹನಗಳು ಮುಳುಗಿದ್ದರಿಂದ ರಸ್ತೆಗಳು ಹಳ್ಳಗಳಂತ್ತಾಗಿವೆ.

ಸುದ್ದಿಸಂಸ್ಥೆ ಎಎನ್ಐ ಬುಧವಾರ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹೈದರಾಬಾದ್ ನ ಡೆಮ್ಮೈಗುಡಾ ಪ್ರದೇಶದಲ್ಲಿ ಮಳೆ ನೀರಿನಿಂದ ಕಾರೊಂದು ಕೊಚ್ಚಿಕೊಂಡು ಹೋಗುವ ದೃಶ್ಯ ಕಾಣಬಹುದು.

ತೆಲಂಗಾಣದ ಕೆಲವು ನೆರೆ ಪೀಡಿತ ಪ್ರದೇಶಗಳ ದೃಶ್ಯಗಳನ್ನು ಸಹ ಎಎನ್ ಐ ಹಂಚಿಕೊಂಡಿದೆ.

Edited By : Nirmala Aralikatti
PublicNext

PublicNext

14/10/2020 02:27 pm

Cinque Terre

73.36 K

Cinque Terre

0

ಸಂಬಂಧಿತ ಸುದ್ದಿ