ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ರಣ ರೋಚಕ ಕಾಳಗ ನಡೆಸಿದ ಪೈಲ್ವಾನ್‌ಗಳು..!

ಮೈಸೂರು: ನಿನ್ನೆಯಷ್ಟೇ ನಾಡಹಬ್ಬ ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ಸಿಕ್ಕಿದ್ದು ಇಂದು ಎರಡನೇ ದಿನವೂ ಭರ್ಜರಿಯಾಗಿ ಪೈಲ್ವಾನ್‌ಗಳು ಕುಸ್ತಿ ಅಖಾಡಕ್ಕೆ ಇಳಿದು ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. ಮಟ್ಟಿ ಮಣ್ಣಿನಲ್ಲಿ ತೊಡೆ ತಟ್ಟಿದ ಜಗಜಟ್ಟಿಗಳು ಮೂರು ವಿಭಾಗಗಳಾದ ನಾಡಕುಸ್ತಿ, ಪಾಯಿಂಟ್ ಕುಸ್ತಿ, ಪಂಜ ಕುಸ್ತಿಯಲ್ಲಿ ಭಾಗಿಯಾಗಿದ್ದಾರೆ.

ಒಟ್ಟು 7 ದಿನಗಳ ಕಾಲ ನಡೆಯಲಿರೋ ದಸರಾ ಕುಸ್ತಿ ಪಂದ್ಯಾವಳಿಗೆ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿ ಮೈಸೂರಿನ ಮಟ್ಟಿಯ ಮಣ್ಣಿನಲ್ಲಿ ರಣರೋಚಕ ಕಾಳಗ ನಡೆಸುತ್ತಿದ್ದಾರೆ. ಅದರಲ್ಲು 86 ಕೆ.ಜಿ.ಮೇಲ್ಪಟ್ಟು ವಿಭಾಗದಲ್ಲಿ ದಸರಾ ಕಂಠೀರವ, 74 ರಿಂದ 86 ಕೆ.ಜಿ. ವಿಭಾಗದ ದಸರಾ ಕೇಸರಿ‌, 57 ರಿಂದ 65 ಕೆ.ಜಿ. ವಿಭಾಗದಲ್ಲಿ ದಸರಾ ಕಿಶೋರ, 57 ರಿಂದ 62 ಕೆ.ಜಿ. ವಿಭಾಗದ ದಸರಾ ಕಿಶೋರಿ, 74 ಕೆ.ಜಿ. ಮೇಲ್ಪಟ್ಟು ಮೈಸೂರು ವಿಭಾಗ ಮಟ್ಟದ ಮೈಸೂರು ದಸರಾ ಕುಮಾರ್ ಪ್ರಶಸ್ತಿಗಾಗಿ ಸೆಣಸಾಟ ನಡೆಯಲಿದೆ. ಅಲ್ಲದೆ ಬಾಲಕ, ಬಾಲಕಿಯರ 17 ವರ್ಷದ ವಯೋಮಿತಿಯ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿದ್ದು, ಪ್ರತಿದಿನ 25ರಿಂದ‌ 30 ಜೊತೆ ಕುಸ್ತಿ ಜೊತೆಗೆ 250ಕ್ಕೂ ಹೆಚ್ಚು ಕುಸ್ತಿಪಟುಗಳು ಒಟ್ಟಾರೆ ಕುಸ್ತಿಯಲ್ಲಿ ಭಾಗಿಯಾಗಲಿದ್ದಾರೆ.

Edited By : Nagesh Gaonkar
PublicNext

PublicNext

05/10/2024 07:57 am

Cinque Terre

22.98 K

Cinque Terre

0