ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವೇಳೆ ಕಳಪೆ ಔಷಧ ಬಳಕೆ ಆರೋಪ?

ಡಯಾಲಿಸಿಸ್ ಗೆಂದು ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಕಳಪೆ ಗುಣಮಟ್ಟದ ಔಷಧಿ ಬಳಸುತ್ತಿರುವುದರಿಂದ ತೀವ್ರ ಅಡ್ಡ ಪರಿಣಾಮ ಉಂಟಾಗಿ ರೋಗಿಗಳು ನೋವು ಅನುಭವಿಸುತ್ತಿದ್ದಾರೆ ಎಂದು ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಮಣಿಕಂಠ ರಾಜ್ ಗೌಡ ಕಳವಳ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆ ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಮಣಿಕಂಠ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದು “ಈ ಹಿಂದೆ ಬಿ.ಆರ್.ಎಸ್ ಎಂಬ ಕಂಪನಿಯು ಔಷಧಿಗಳನ್ನು ನೀಡುತ್ತಿತ್ತು. ಆದರೆ ಸರ್ಕಾರವು ಈಗ ಅದರ ಬದಲಿಗೆ, ಸಂಜೀವಿನಿ ಎಂಬ ಖಂಪನಿಗೆ ಔಷಧಿ ಸರಬರಾಜು ಜವಾಬ್ದಾರಿಯನ್ನು ವಹಿಸಿದೆ. ಸಂಜೀವಿನಿ ಕಂಪನಿಯವರು ಕಳಪೆ ಔಷಧಿಗಳನ್ನು ನೀಡುತ್ತಿದ್ದು, ಇದರಿಂದ ರೋಗಿಗಳ ಆರೋಗ್ಯದ ಮೇಲೆ ತೀವ್ರ ಅಡ್ಡ ಪರಿಣಾಮ ಬೀರಿದೆ” ಎಂದು ಆರೋಪಿಸಿದ್ದಾರೆ.

ಔಷಧಿಯಿಂದ ಸಂಕಷ್ಟಕ್ಕೀಡಾಗಿರುವ ರೋಗಿಯಬ್ಬರು ಮಾತನಾಡಿ “ ಈ ಔಷಧಿ ಪಡೆದುಕೊಂಡಾಗಿನಿಂದ, ತಲೆಸುತ್ತು ಬರುವ ಹಾಗೆ ಆಗುತ್ತಿದ್ದು, ರಕ್ತ ಸಂಚಲನವಾಗದೆ ಹೆಪ್ಪುಗಟ್ಟುತ್ತಿದೆ” ಎಂದು ನೋವು ತೋಡಿಕೊಂಡಿದ್ದಾರೆ.

ಈ ಬಗ್ಗೆ ಆಸ್ಪತ್ರೆಯ ಆರೋಗ್ಯಾಧಿಕಾರಿಯನ್ನು ಮಾಹಿತಿ ಕೇಳಿದರೆ ಔಷಧಿಗಳು ಸರ್ಕಾರದಿಂದ ಬರುತ್ತವೆ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ಅಸಡ್ಡೆ ಉತ್ತರ ನೀಡುತ್ತಾರೆ. ಈ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕೂಡಲೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ

Edited By :
PublicNext

PublicNext

28/09/2022 08:05 pm

Cinque Terre

34.6 K

Cinque Terre

0