ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ಬೇಡ - ಡಾ.ಡಿ ತಿಮ್ಮಯ್ಯ

ಮೈಸೂರು : ಗ್ರಾಮ ಪಂಚಾಯತಿ ಜನಪ್ರತಿನಿಧಿನಗಳ ಅಧಿಕಾರವನ್ನ ಪಿಡಿಓಗಳಿಗೆ ವರ್ಗಾಹಿಸುವ ಸರ್ಕಾರದ ನಿರ್ಣಯವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ ಡಾ ಡಿ ತಿಮ್ಮಯ್ಯ ಗ್ರಾಮ ಸ್ವರಾಜ್ಜನನ ಮತ್ತು ಪಂಚಾಯತ್ ರಾಜ್ ಅಧಿನಿಯಮಕ್ಕೆ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ ಇದರಿಂದ ಅಭಿವೃದ್ಧಿಗಳ ಕುರಿತ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಚೆಕ್ ಸಹಿ ಹಾಕುವ ಅಧಿಕಾರವನ್ನು ಪಂಚಾಯತ್ ಜನಪ್ರತಿನಿಧಿಗಳಿಂದ ಕಿತ್ತುಕೊಳ್ಳಲಿದೆ.

ಆದ್ದರಿಂದ ಬಿಜೆಪಿ ಸರ್ಕಾರ ಈ ಕೂಡಲೇ ಈ ನಿಯಮವನ್ನ ಕೈ ಬಿಡಬೇಕು ಎಂದಿನಂತೆ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ನೀಡಲು ಸಿಎಂ ಮುಂದಾಗಬೇಕು ಎಂದು ಸುದ್ದಿಗೋಷ್ಟಿಯಲ್ಲಿ ಎಂ.ಎಲ್. ಸಿ ಡಾ.ಡಿ.ತಿಮ್ಮಯ್ಯ ಆಗ್ರಹಿಸಿದ್ದಾರೆ.

Edited By : Manjunath H D
PublicNext

PublicNext

08/10/2022 05:19 pm

Cinque Terre

10.01 K

Cinque Terre

0