ಮೈಸೂರು: ರಾಜ್ಯದಾದ್ಯಂತ ಕಾಂಗ್ರೆಸ್ ಪೇ ಸಿಎಂ ಅಭಿಯಾನ ವಿಚಾರಕ್ಕೆ ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಇದು ಡರ್ಟಿ ಪಾಲಿಟಿಕ್ಸ್‌ನ ಒಂದು ಭಾಗ ಇದು ಕಾಂಗ್ರೆಸ್ ಅಧಃಪತನವನ್ನು ಸೂಚಿಸುತ್ತಿದೆ, ಇದೊಂದು ಸುಳ್ಳು ಬೋಗಸ್ ಪ್ರಚಾರ ಅನ್ನೋದು ಜನರಿಗೆ ಗೊತ್ತಿದ್ದು ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಮಾಡುತ್ತಾ ರಾಜ್ಯದ ಮರ್ಯಾದೆ ಕಳೆಯುತ್ತಿದೆ ಎಂದರು.
ಈ ವಿಚಾರದ ರಕ್ಷಣೆಗಾಗಿ ನಾನು ಜಾತಿ ಬಳಕೆ ಮಾಡಿಲ್ಲ ಈ ರೀತಿ ಮಾಡಿದಾಗ ಕೆಲವರಿಗೆ ನೋವಾಗಿ ಜಾತಿ ವಿಚಾರ ಮಾತನಾಡಿದ್ದಾರೆ ಇತ್ತೀಚೆಗೆ ವೈಯಕ್ತಿಕ ಟೀಕೆ ಹೆಚ್ಚಾಗುತ್ತಿದೆ ಸದನದಲ್ಲೂ ದಾಖಲೆ ನೀಡಲು ಕೇಳಿದ್ದೇವು ಅವರ ಬಳಿ ಯಾವ ದಾಖಲೆಯೂ ಇಲ್ಲ, ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.
PublicNext
25/09/2022 10:36 pm