ಮೈಸೂರು: ಮೈಸೂರಿನಲ್ಲಿ ಪಿಎಸ್ ಐ ಹಗರಣ ವ್ಯಾಪಕ ಸದ್ದು ಮಾಡ್ತಿದೆ.ಇದೀಗ ಡೀಲ್ ನಲ್ಲಿ ಭಾಗಿಯಾಗಿದ್ದ ಮೈಸೂರಿನ PSI ಅಶ್ವಿನಿ ಅನಂತಪುರ ಅವರು ಮಾತನಾಡಿದ 30 ನಿಮಿಷದ ಆಡಿಯೋ ಕ್ಲಿಪಿಂಗ್ ಬಿಡುಗಡೆಯಾಗಿದೆ.
ಹೌದು FDI ಪರೀಕ್ಷೆ ವಿಚಾರವಾಗಿ ಲಂಚದ ಬೇಡಿಕೆ ಇಟ್ಟಿರುವ ಆಡಿಯೋ ಇದೀಗ ಬಿಡುಗಡೆಯಾಗಿದ್ದು ವ್ಯಾಪಕ ಸದ್ದು ಮಾಡ್ತಿದೆ.ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ರಿಂದ ಆಡಿಯೋ ಸಂಭಾಷಣೆ ರಿಲೀಸ್ ಆಗಿದೆ. ಸಂಗಮೇಶ ಜಲಕಿ ಎಂಬ ಅಭ್ಯರ್ಥಿಯ ಜೊತೆ PSI ಅಶ್ವಿನಿ ಮಾತನಾಡುತ್ತಿದ್ದರು .ಇನ್ನು ಮೈಸೂರಿನ ಎನ್ ಆರ್ ಠಾಣೆಯಲ್ಲಿ ಅಶ್ವಿನಿ ಅನಂತ ಪುರ ಪಿ ಎಸ್ ಐ ಆಗಿದ್ರು. ಅಶ್ವಿನಿ ಮೂಲತಃ ಭಾಗಲಕೋಟೆಯ ಜಮಖಂಡಿಯವರು.PIS ಹಗರಣಕ್ಕೆ ಸಂಬಂಧಪಟ್ಟಂತೆ ಡೀಲ್ ಕುದುರಿಸುತ್ತಾರೆ.
ಬೆಸ್ಕಾಂ, ಚೆಸ್ಕಾಂ, ಎಫ್ ಡಿ ಐ ವಿವಿಧ ಹುದ್ದೆಗಳಲ್ಲಿ ಡೀಲ್ ಮಾಡುತ್ತಿದ್ದಾರೆ.ಪ್ರತಿ ಜಿಲ್ಲೆಯಲ್ಲಿ ಇಂತವರು ಇದ್ದಾರೆ ಎನ್ನುವ ಮಾಹಿತಿ ಸಿಕ್ಕಿದ್ದು,ಸತ್ಯಾ ಸತ್ಯತೆ ಹೊರಗೆ ಬರಬೇಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಬಾರಿ ಹಣ ವರ್ಗಾವಣೆಯಾಗಿದೆ.ಇನ್ನು ಈ ಹಗರಣದ ಹಿಂದೆ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ ಮಾಡಿದ್ದಾರೆ.
PublicNext
18/09/2022 02:08 pm