ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಬಂದೂಕು ಹಿಡಿದು ರಸ್ತೆಯಲ್ಲಿ ಕೆಲವರ ಓಡಾಟ.!

ಮೈಸೂರು : ಮೈಸೂರಿನಲ್ಲಿ ಭೂ ವಿವಾದ ಬಗೆಹರಿಸಲು ಬಂದೂಕು ಹಿಡಿದು ಬಂದ ಬೌನ್ಸರ್‌ಗಳು ಮೈಸೂರು ಹೊರವಲಯದ ರಿಂಗ್ ರಸ್ತೆಯಲ್ಲಿ ಓಡಾಡಿದ್ದಾರೆ. 35 ಗುಂಟೆ ಜಾಗದ ವಿಚಾರವಾಗಿ ಗೊಂದಲವಿದ್ದು, ಮೈಸೂರಿನ ಅಕ್ಷಯ್ ಗೌಡ ಎಂಬುವವರಿಗೆ ಸೇರಿದ ಜಾಗ ಇದಾಗಿದೆ.

ಆದರೆ ಈ ಜಾಗ ನಮಗೆ ಸೇರಬೇಕೆಂದು ಬೆಂಗಳೂರಿನಿಂದ ಬಂದಿದ್ದ ಕೆಲವರು ಬಂದೂಕು ಹಿಡಿದು ಅಲ್ಲಿದ್ದವರನ್ನು ಬೆದರಿಸಿ ವಶಕ್ಕೆ ಪಡೆದಿದ್ದರು. ಬಳಿಕ ನ್ಯಾಯಾಲಯದಿಂದ ಅಕ್ಷಯ್ ಅವರಿಗೆ ಸೇರಿದ ಜಾಗ ಎಂದು ತೀರ್ಪು ನೀಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, ನ್ಯಾಯಾಲಯದ ತೀರ್ಪು ಇದ್ದರೂ ಬಲವಂತವಾಗಿ ಭೂಮಿ ವಶಕ್ಕೆ ಪಡೆದ ಆರೋಪವಿತ್ತು. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಬಂದ ಆಲನಹಳ್ಳಿ ಪೊಲೀಸರನ್ನ ಕಂಡ ತಕ್ಷಣ ಎಲ್ಲರೂ ಆ ಸ್ಥಳದಿಂದ ಪರಾರಿಯಾಗಿದ್ದಾರೆ.

Edited By : Somashekar
PublicNext

PublicNext

10/01/2025 05:35 pm

Cinque Terre

15.83 K

Cinque Terre

0