ಮೈಸೂರು: ನಾಗರಹೊಳೆ ಅಭಯಾರಣ್ಯದ ನಡುವೆ ಸಾಗುವ ಮೈಸೂರು-ಮಾನಂತವಾಡಿ ರಸ್ತೆಯಲ್ಲಿ ಅಡ್ಡಲಾಗಿ ಸಾಗುತ್ತಿದ್ದ ಹೆಬ್ಬಾವೊಂದನ್ನು ವ್ಯಕ್ತಿಯೊಬ್ಬ ಕೈಯಿಂದ ಹಿಡಿದು ರಸ್ತೆ ಬದಿಗೆ ಎಸೆದ ವಿದ್ಯಮಾನ ನೆಟ್ಟಿಗರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.
ರಾತ್ರಿ ವೇಳೆ ಬಸ್ಸೊಂದು ಸಾಗುತ್ತಿದ್ದ ರಸ್ತೆಯಲ್ಲಿ ಅಡ್ಡಲಾಗಿ ಹೆಬ್ಬಾವು ಮಲಗಿತ್ತು. ವಾಹನದ ಬೆಳಕಿಗೂ ಅದು ಹೆದರದೆ ತನ್ನ ಪಾಡಿಗೆ ಇತ್ತು. ದೊಡ್ಡ ಗಾತ್ರದ ಈ ಹೆಬ್ಬಾವು ರಸ್ತೆಯ ಅರ್ಧ ಭಾಗವನ್ನು ಕ್ರಮಿಸಿ ಮಲಗಿಕೊಂಡಂತೆ ಕಾಣುತ್ತಿತ್ತು. ಇದು ಕೇರಳವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾದ ಈ ರಸ್ತೆಯಲ್ಲಿ ಬಹುಶಃ ತುಂಬಾ ವಾಹನಗಳು ಸಾಲುಗಟ್ಟಿ ನಿಂತಿರಬೇಕು.ಈ ನಡುವೆ ವ್ಯಕ್ತಿಯೊಬ್ಬ ಬಸ್ಸಿನಿಂದ ಇಳಿದು ನೇರವಾಗಿ ಹೆಬ್ಬಾವಿನ ಬಳಿಗೆ ಹೋಗುತ್ತಾನೆ.
ಆಗ ಬಸ್ಸಿನಲ್ಲಿದ್ದವರು, ಇತರರು ಹೋ ಎಂದು ಕಿರುಚುತ್ತಾರೆ. ಆದರೆ, ಆ ವ್ಯಕ್ತಿ ಯಾವುದಕ್ಕೂ ಕ್ಯಾರೇ ಅನ್ನದೆ ಹೆಬ್ಬಾವಿನ ಬಾಲವನ್ನು ಹಿಡಿದು ಎತ್ತಿ ರಸ್ತೆ ಬದಿಗೆ ಎಸೆಯುತ್ತಾನೆ. ಹೆಬ್ಬಾವು ಬಳಿಕ ಸರಸರನೆ ಚಲಿಸಿ ಮರೆಯಾಗುತ್ತದೆ. ಪ್ರಯಾಣಿಕ ಶೌರ್ಯ ಪ್ರದರ್ಶಿಸಿದ ಹುಮ್ಮಸ್ಸಿನಲ್ಲಿ ಬಸ್ಗೆ ಮರಳುತ್ತಾನೆ. ಇವಿಷ್ಟು ದೃಶ್ಯಗಳಿರುವ ಒಂದು ಪೋಸ್ಟ್ನ್ನು ಜೋಸೆಫ್ ಹೋವರ್ ಎಂಬವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಚರ್ಚೆಯನ್ನು ಹುಟ್ಟುಹಾಕಿದೆ.
PublicNext
30/09/2022 06:29 pm