ಮೈಸೂರು: ಹೆಚ್.ಡಿ ಕೋಟೆಯಲ್ಲಿ ನಿರ್ಮಾಣವಾಗುತ್ತಿರುವ ಆದಿವಾಸಿಗರ ಭವನ ಕಳಪೆ ಕಾಮಗಾರಿಯಿಂದ ಅತಂತ್ರ ಸ್ಥಿತಿಯತ್ತ ಸಾಗುತ್ತಿದೆ ಎಂದು ಆದಿವಾಸಿ ಮುಖಂಡ ಶಿವರಾಜು ಆರೋಪಿಸಿದ್ದಾರೆ
ಎಚ್.ಡಿ.ಕೋಟೆ ತಾಲೋಕು ಕೇಂದ್ರ ಸ್ಥಾನದಲ್ಲಿ ಸುಮಾರು 1ಕೋಟೆ ಅಂದಾಜು ವೆಚ್ಚದಲ್ಲಿ ಪ್ರಗತಿಯಲ್ಲಿರುವ ಆದಿವಾಸಿಗರ ಭವನ ಕಾಮಗಾರಿ ತೀರ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಂಡೂ ಕಾಣದಂತೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕೂಡಲೆ ಸರ್ಕಾರ ಮಧ್ಯ ಪ್ರವೇಶಿಸಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಕಳಪೆ ಕಾಮಗಾರಿ ತಡೆಗಟ್ಟಿ ಗಯಣಮಟ್ಟದ ಕಾಮಗಾರಿ ನೆರವೇರಿಸುವಂತೆ ಆಗ್ರಹಿಸಿದ್ದಾರೆ.
PublicNext
08/10/2022 06:30 pm