ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಭಾರತ್ ಜೋಡೋ ಯಾತ್ರೆಗೆ ಹಿಂದಿಯಲ್ಲಿ ಸ್ವಾಗತದ ಬೋರ್ಡ್: ಕನ್ನಡಿಗರಿಂದ ಆಕ್ರೋಶ

ಮೈಸೂರು: ಭಾರತ್ ಜೋಡೋ ಯಾತ್ರೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ರಾಜ್ಯ ಕಾಂಗ್ರೆಸ್ ನಾಯಕರು ಪೋಸ್ಟರ್ ಹಾಕಿದ್ದು, ಹಿಂದಿ ಭಾಷೆಯಲ್ಲಿ ರಾಹುಲ್ ಗಾಂಧಿ ಸ್ವಾಗತಿಸುವ ಬೋರ್ಡ್ ಹಾಕಲಾಗಿದೆ.

ಕರ್ನಾಟಕದಲ್ಲಿ ಹಿಂದಿ ಭಾಷೆಯ ಪೋಸ್ಟರ್ ಅಳವಡಿಕೆಗೆ ಈಗ ಭಾರೀ ವಿರೋಧ ವ್ಯಕ್ತವಾಗ್ತಿದೆ. ಇದಕ್ಕೆ ರೊಚ್ಚಿಗೆದ್ದ ಕನ್ನಡದ ಅಭಿಮಾನಿಗಳು ಕನ್ನಡ ಬಳಸಿ ಎಂದು ಪೋಸ್ಟರ್ ಮೇಲೆ‌ ಬರೆಯುತ್ತಿದ್ದಾರೆ. ಇನ್ನು ಈ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪದಲ್ಲಿ ನಡೆದಿದೆ.

Edited By : Somashekar
Kshetra Samachara

Kshetra Samachara

29/09/2022 07:18 pm

Cinque Terre

2.12 K

Cinque Terre

0

ಸಂಬಂಧಿತ ಸುದ್ದಿ