ಮೈಸೂರು: ಸ್ವಚ್ಛ ಸರ್ವೇಕ್ಷಣ್ -2022 ರ ಅಂಗವಾಗಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ಬಾರಿ ಶಿವಮೊಗ್ಗ ಮೊದಲ ಪ್ರಶಸ್ತಿ ಪಡೆದಿದ್ದು, ಮೈಸೂರು ಮೂರನೇ ಸ್ಥಾನ ಪಡೆದಿದೆ.
10ಲಕ್ಷ ಜನಸಂಖ್ಯೆ ಒಳಗಿನ ಮಹಾ ನಗರಗಳ ಸ್ಪರ್ಧೆಯಲ್ಲಿ ಶಿವಮೊಗ್ಗ, ಮೈಸೂರು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ನಗರಗಳು ಭಾಗಿಯಾಗಿದ್ದವು. ಕಳೆದ ವರ್ಷ ಮೈಸೂರಿಗೆ 5 ಸ್ಟಾರ್ ರ್ಯಾಕಿಂಗ್ ಪಟ್ಟ ಸಿಕ್ಕಿತ್ತು. ಮೇಯರ್ ಶಿವಕುಮಾರ್, ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಅಕ್ಟೋಬರ್ ಒಂದರಂದು ದೆಹಲಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರತೀ ವರ್ಷ ಅಕ್ಟೋಬರ್ ಒಂದರ ಗಾಂಧೀ ಜಯಂತಿ ದಿನ ರಾಷ್ಟ್ರಪತಿ ಯವರು ಪ್ರಶಸ್ತಿ ವಿಜೇತ ನಗರಗಳಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಇಂದೋರ್ ನಗರ ಸತತ 5 ವರ್ಷಗಳಿಂದ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸುತ್ತಾ ಬಂದಿತ್ತು. ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದ್ದವು.
Kshetra Samachara
28/09/2022 05:16 pm