ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆರಂಭದಿಂದಲೂ ವಿವಿಧ ಕಾರ್ಯಕ್ರಮಗಳಿಗೆ ಸಾಲು ಸಾಲು ಸಚಿವರ ಗೈರು ಎದ್ದು ಕಾಣುತ್ತಿದೆ.
ತಮ್ಮ ಇಲಾಖೆಯ ಕಾರ್ಯಕ್ರಮಗಳಿದ್ದರೂ ಸಚಿವರು ಮಾತ್ರ ಗೈರು ಆಗುತ್ತಿದ್ದಾರೆ. ಇದೀಗ ಸಾರಿಗೆ ಇಲಾಖೆಯ ಸಚಿವ ಶ್ರೀರಾಮುಲು ದಸರಾ ದರ್ಶನಕ್ಕೂ ಗೈರು ಆಗಿದ್ದಾರೆ. ಅದರಲ್ಲೂ ತಾವೇ ಉದ್ಘಾಟಿಸಬೇಕಾದ ಕಾರ್ಯಕ್ರಮಕ್ಕೂ ಸಚಿವರು ಆಗಮಿಸಲೇ ಇಲ್ಲ. ಹೀಗಾಗಿ ಸಚಿವರಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಬೇಡವಾಯಿತಾ? ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮಾತ್ರ ಸೀಮಿತವಾಯಿತಾ ಎನ್ನುವ ಪ್ರಶ್ನೆ ಎದ್ದಿದೆ. ಅವರು ಸದ್ಯ ಒಂದ್ ಮ್ಯಾನ್ ಶೋ ನಂತೆ ಎಲ್ಲಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ.
PublicNext
28/09/2022 03:04 pm