ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಮಿಕ ಸಾವು : ಕಾರ್ಖಾನೆ ಮುಂದೆ ಶವ ಇಟ್ಟು ಕುಟುಂಬಸ್ಥರ ಪ್ರತಿಭಟನೆ

ಮೈಸೂರು : ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೇಲ್ಚಾವಣಿಯಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದ ಕೆಎಸ್ ಐಸಿ ಕಾರ್ಖಾನೆಯಲ್ಲಿ ನೆಡೆದಿದೆ.

ಟಿ. ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದ ನಿವಾಸಿ ಶಿವಕುಮಾರ್ (45) ಮೃತ ವ್ಯಕ್ತಿಯಾಗಿದ್ದು ಕೆಎಸ್ ಐಸಿ ಕಾರ್ಖಾನೆಯಲ್ಲಿ ಕಳೆದ 20ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಕಾರ್ಖಾನೆ ಸಿಬ್ಬಂದಿಗಳು ನೀಡಿದ ಸೂಚನೆಯ ಮೇರೆಗೆ ಕಾರ್ಖಾನೆ ಮೆಲ್ಚಾವಣಿ ಶುಚಿತ್ವಗೊಳಿಸುವ ಸಂದರ್ಭ ಆಯ ತಪ್ಪಿ ಮೇಲಿಂದ ಬಿದ್ದಿದ್ದಾನೆ ಬಳಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ

ಆಸ್ಪತ್ರೆಗೆ ಸೇರಿಸುವ ವೇಳೆ ಪರಿಹಾರದ ಆಮಿಷ ನೀಡಿದ್ದ ಅಧಿಕಾರಿಗಳು ಬಳಿಕ ಆಸ್ಪತ್ರೆಯತ್ತ ತಿರುಗಿಯೂ ನೋಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಕಾರ್ಖಾನೆ ಮುಂಭಾಗ ಶವವಿಟ್ಟು ಪ್ರತಿಭಟನೆ ನೆಡೆಸುತ್ತಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕುಟುಂಬಸ್ಥರ ಮನವೊಲಿಸಲು ಪ್ರಯತ್ನ ನೆಡೆಸಿದ್ದು ಯಾವುದೇ ಮನವಿಗೂ ಬಗ್ಗದ ಕುಟುಂಬಸ್ಥರು ಶಿವಕುಮಾರ್ ಸಾವಿಗೆ ನ್ಯಾಯ ಸಿಗುವ ತನಕ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ.

Edited By : Somashekar
Kshetra Samachara

Kshetra Samachara

12/10/2022 12:17 pm

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ