ಮೈಸೂರು: ಆಹಾರ ಮೇಳದಲ್ಲಿ ಹಲವಾರು ರುಚಿ ರುಚಿ ಆಹಾರ ಪದಾರ್ಥಗಳನ್ನು ಸವಿಯುತ್ತಿದ್ದ ಜನರ ಮಧ್ಯದಲ್ಲಿ ಇಬ್ಬರೂ ಪುಟ್ಟ ಬಾಲಕ ಬಾಲಕಿಯರ ಭಿಕ್ಷೆ ಬೇಡುತ್ತಿದ್ದರು ಅದನ್ನು ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ರಾಜ್ಯ ಸದಸ್ಯರು ರೇಣುಕರಾಜ ಸ್ಥಳದಲ್ಲಿದ್ದಂತಹ ಪೊಲೀಸ್ ಅಧಿಕಾರಿಗಳಿಗೆ ವಿಚಾರವನ್ನು ತಿಳಿಸಿ ಅವರ ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿ ಮತ್ತೊಮ್ಮೆ ಇಂತಹ ಘಟನೆಗಳನ್ನು ಮರುಕಳಿಸದಂತೆ ಎಚ್ಚರಿಸಿದರು. ಹಾಗೆಯೇ ಮೈಸೂರು ಪಾರಂಪರಿಕ ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಇಂತಹ ದೃಶ್ಯಗಳನ್ನು ನೋಡಿದರೆ ಅವಮಾನ ಎಂದು ಬೆಸರ ವ್ಯಕ್ತಪಡಿಸಿದರು.
PublicNext
30/09/2022 05:26 pm