ಟಿ. ನರಸೀಪುರ: ಚೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಡ ಕುಟುಂಬವೊಂದು ಬಲಿಯಾಗಿದ್ದು ವಿದ್ಯುತ್ ಶಾಕ್ ನಿಂದ ರೈತ ಕೈ ಕಾಲು ಸ್ವಾದಿನ ಕಳೆದುಕೊಂಡು ಆತನ ಕುಟುಂಬ ಕಂಗಾಲಾಗಿದೆ .
ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ ಮಾದೇಗೌಡನಹುಂಡಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ರೈತ ಬಸವರಾಜು ವಿದ್ಯುತ್ ಶಾಕ್ ಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ಕೆಲ ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಚೆಸ್ಕಾಂ ನಿರ್ಲಕ್ಷದಿಂದ ವಿದ್ಯುತ್ ತಗುಲಿದ್ದು ಬಳಿಕ ಬಸವರಾಜುಗೆ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದ ಚೆಸ್ಕಾಂ ಇಲಾಖೆ ಅಧಿಕಾರಿಗಳು ಪರಿಹಾರದ ಭರವಸೆ ನೀಡಿ ಬಳಿಕ ಮನೆಕಡೆಗೆ ತಿರುಗಿಯೂ ನೋಡಿಲ್ಲ. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡು ಚೆಸ್ಕಾಂ ಇಲಾಖೆ ಕಛೇರಿಮುಂದೆ ಮುಂದೆ ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಪಟ್ಟು ಹಿಡಿದಿದ್ದಾರೆ.
PublicNext
11/10/2022 04:03 pm