ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಸಾವಿನ ಅಂಚಿನಲ್ಲಿರುವ ಪತಿ, ಪತಿಯ ಉಳುವಿಗಾಗಿ ಹಂಬಲಿಸುತ್ತಿರುವ ಪತ್ನಿ

ಕೆ.ಆರ್.ನಗರ : ವೀಕ್ಷಕರೇ ವಿಧಿ ಆಟವೇ ಹಂಗೆ ನಾವು ಅಂದುಕೊಳ್ಳುವುದೇ ಒಂದು ಅದು ಆಗುವುದೆ ಒಂದು. ಹೌದು ಈ ಮನ ಕಲಕುವ ಸಂಗತಿಯನ್ನ ಕೇಳಿದ್ರೆ ಎಂತವರಿಗಾದ್ರೂ ಕಣ್ಣಲ್ಲಿ ನೀರು ಬರುವುದು ನಿಶ್ಚಿತ. ಎಲ್ಲರಿಗೂ ಆಸೆ ಇರುತ್ತೆ ನಾನು ನನ್ನ ಗಂಡ ನನ್ನ ಮಕ್ಕಳು ಎಲ್ಲರೂ ಸಮಾಜದಲ್ಲಿ ಬಾಳಿ ಬದುಕಬೇಕು ಎಂದು ಆಸೆಯಿರುತ್ತೆ, ಆದರೆ ಇವರ ಬದುಕಿನಲ್ಲಿ ದೇವರ ಆಟವೇ ಬೇರೆ ಇದೆ.

ಕೃಷ್ಣರಾಜನಗರ ತಾಲೂಕಿನ ನಾರಾಯಣಪುರ ಗ್ರಾಮದ ಕೇವಲ 28 ವರ್ಷದ ಯುವಕ ಪ್ರದೀಪ್ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಪತ್ನಿ ಅದೇ ನೋವಿನ ಸಂಕಷ್ಟದಲ್ಲಿದ್ದಾರೆ. ಪ್ರದೀಪ್ ರವರಿಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಲಿವರ್ ಮತ್ತು ಎರಡು ಕಿಡ್ನಿಗಳ ವೈಫಲ್ಯ ಇದೆ. ಇದಕ್ಕಾಗಿ ಅವರು ಮೈಸೂರಿನ ಜೆಎಸ್ಎಸ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಡ ಕುಟುಂಬದವರಾಗಿದ್ದು, ಆಸ್ಪತ್ರೆಗೆ ಬಿಲ್ ಪಾವತಿಸಲಾಗದೆ ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಬರಲಾಗಿತ್ತು. ಆದರೆ ಸ್ನೇಹಿತರು ಹಾಗೂ ಅವರ ಪತ್ನಿ ತನ್ನ ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಹಂಬಲದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಚಿಕಿತ್ಸೆಗೆ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದೆ.

ಆದ್ದರಿಂದ ದಾನಿಗಳು ಇವರಿಗೆ ಸಹಾಯ ಮಾಡುವ ಮೂಲಕ ಬದುಕಿ ಬಾಳಬೇಕಾದ ಈ ಕುಟುಂಬಕ್ಕೆ ನೆರವಾಗಬೇಕಾಗಿದೆ. ಈ ಸಂಬಂಧ ಜೆಡಿಎಸ್ ಮುಖಂಡರಾದ ರುದ್ರೇಶ್ ಅವರು ಮಾನವೀಯತೆಯಿಂದ ಈ ಕುಟುಂಬಕ್ಕೆ ಎಲ್ಲರೂ ಧನಸಹಾಯ ಮಾಡಬೇಕಾಗಿದೆ ದಯಮಾಡಿ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗುವ ಕೆಲಸ ಮಾಡೋಣ ಎಂಬ ಕರೆ ನೀಡಿದ್ದಾರೆ.

ವೀಕ್ಷಕರೆ ಇನ್ನು ಬದುಕಿ ಬಾಳಬೇಕಾದ ವಯಸ್ಸು ಅವರದ್ದು, ಇಂತಹ ವಯಸ್ಸಿನಲ್ಲಿ ದೇವರ ಆಟ ಬೇರೆದೆ ಆಗಿದೆ. ಬಡ ಕುಟುಂಬಕ್ಕೆ ನೆರವು ನೀಡಿ ಎಲ್ಲರೂ ಮಾನವೀಯತೆ ಮರೆಯಬೇಕಾದ ಕ್ಷಣ ಇದಾಗಿದೆ. ಅವರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ. ಇವರಿಗೆ ಸಹಾಯ ಮಾಡಲು ಬಯಸುವವರು ಈ ಸಂಖ್ಯೆಗೆ ಸಂಪರ್ಕಿಸಬಹುದು 7026498729.

Edited By : Nagesh Gaonkar
PublicNext

PublicNext

23/09/2022 10:03 pm

Cinque Terre

28.25 K

Cinque Terre

2

ಸಂಬಂಧಿತ ಸುದ್ದಿ