ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಸೈಬರ್ ಅಪರಾಧದ ಜಾಗೃತಿ ಮಳಿಗೆ ಆರಂಭ

ಮೈಸೂರು: ಸೈಬರ್ ಅಪರಾಧದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಹಯೋಗದೊಂದಿಗೆ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಸೈಬರ್ ತಿಳಿವಳಿಕೆ ಮಳಿಗೆಯನ್ನು ತೆಗೆಯಲಾಗಿದೆ.

ಮೈಸೂರು ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ಎಂಬ ಬಗ್ಗೆ ಜನರು ಯಾವ ರೀತಿ ಜಾಗೃತರಾಗಿರಬೇಕು ಎಂಬ ಬಗ್ಗೆ ವಿಡಿಯೋ ಮೂಲಕ ಜನ ಸಾಮಾನ್ಯರಿಗೆ ಮಾಹಿತಿ ನೀಡಲು ಜಾಗೃತಿ ವಿಡಿಯೋಗಳ ತುಣುಕನ್ನು ಇಡಲಾಗಿದ್ದು, ಆ ಮೂಲಕ ಸ್ಕ್ಯಾನ್ ಮಾಡಿ ಆ ವಿಡಿಯೋಗಳನ್ನು ನೋಡಬಹುದು.

ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ನೀಡಲು ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಹಯೋಗದೊಂದಿಗೆ ಎಕ್ಸಿಬಿಷನ್​ ಗ್ರೌಂಡ್​ನಲ್ಲಿ ಸೈಬರ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಮಳಿಗೆಯೊಂದನ್ನು ತೆರೆಯಲಾಗಿದ್ದು, ಅಲ್ಲಿ ಭೇಟಿ ನೀಡಿದರೆ ಸೈಬರ್ ಅಪರಾಧ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

ಇದರಲ್ಲಿ ಒಟಿಪಿ, ಉದ್ಯೋಗ, ಆನ್​​​ಲೈನ್​ ಜಾಹೀರಾತು ಇನ್ನಿತರ ವಿಚಾರದಲ್ಲಿ ಜನರು ಪ್ರತಿದಿನ ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಸೈಬರ್ ತಿಳಿವಳಿಕೆ ಮಳಿಗೆಯನ್ನು ತೆರೆಯಲಾಗಿದೆ.

Edited By : Shivu K
PublicNext

PublicNext

11/10/2022 10:29 am

Cinque Terre

22.96 K

Cinque Terre

0

ಸಂಬಂಧಿತ ಸುದ್ದಿ