ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಇಂದು ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್

ಮೈಸೂರು: ಮೈಸೂರು ಅರಮನೆಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ಇಂದು ನಡೆಯಲಿವೆ.

ರಾಜವಂಶಸ್ಥ ಯದುವೀರ್ ಅವರು ಇಂದು ಖಾಸಗಿ ದರ್ಬಾರ್ ಹಾಲ್​ನಲ್ಲಿ ಬೆಳಿಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬೆಳಗ್ಗೆ 6:15ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 9:45ಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ. 10:45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸುತ್ತವೆ. 11:15ಕ್ಕೆ ಸಿಂಹಾರೋಹಣ ಪೂಜಾ ಕೈಂಕರ್ಯ, ಕಳಸ ಪೂಜೆ ಜೊತೆಗೆ ವಿವಿಧ ಪೂಜೆಗಳು ನೆರವೇರಲಿವೆ.

Edited By : Vijay Kumar
PublicNext

PublicNext

26/09/2022 07:47 am

Cinque Terre

11.22 K

Cinque Terre

0

ಸಂಬಂಧಿತ ಸುದ್ದಿ