ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ಸಿದ್ಧತೆ ಪ್ರಾರಂಭಗೊಂಡಿದೆ.
ಝಗಮಗಿಸುವ ವಿದ್ಯುತ್ ದೀಪಾಲಂಕಾರದ ನಡುವೆ ಗಜಪಡೆಯ ಆನೆಗಳು ಗಾಂಭೀರ್ಯದಿಂದ ಹೆಜ್ಜೆ ಹಾಕಿವೆ. ಗೋಪಾಲಸ್ವಾಮಿ ಮರದ ಅಂಬಾರಿ ಹೊತ್ತು ಸಾಗುತ್ತಿದ್ದರೆ, ಅದರ ಹಿಂದೆ ಅಭಿಮನ್ಯು, ಅರ್ಜುನ, ಭೀಮ, ಮಹೇಂದ್ರ, ಗೋಪಿ, ಧನಂಜಯ, ಕಾವೇರಿ, ಸುಗ್ರೀವ, ಶ್ರೀರಾಮ, ಚೈತ್ರ, ವಿಜಯ, ಪಾರ್ಥಸಾರಥಿ ಆನೆಗಳು ಭಿನ್ನಾಣದಿಂದ ಸಾಗಿದವು. ಜಂಬೂ ಸವಾರಿ ಮೆರವಣಿಗೆ ಸಂಜೆ ವೇಳೆ ನಿಗದಿಯಾಗಿರುವುದರಿಂದ ಅರಣ್ಯ ಇಲಾಖೆಯು ಚೆಸ್ಕಾಂ ಇಲಾಖೆಗೆ ನಾಲ್ಕು ದಿನ ಮೊದಲೇ ವಿದ್ಯುತ್ ದೀಪಾಲಂಕಾರ ಆನ್ ಮಾಡುವಂತೆ ಮನವಿ ಮಾಡಿತ್ತು. ಅದರಂತೆ, ಚೆಸ್ಕಾಂ ಶುಕ್ರವಾರವೇ ವಿದ್ಯುತ್ ದೀಪಾಲಂಕಾರ ಆರಂಭಿಸಿದೆ. ಝಗಮಗಿಸುವ ಬೆಳಕಿನಲ್ಲಿ ಗಜಪಡೆ ಹೆಜ್ಜೆ ಹಾಕಿತು.
PublicNext
25/09/2022 01:01 pm