ಮೈಸೂರು : ಮೈಸೂರು ದಸರಾಗಾಗಿ ಸಾಂಸ್ಕೃತಿಕ ರಾಜಧಾನಿಗೆ ಬಂದಿದ್ದ ಗಜಪಡೆ ಅಭಿಮನ್ಯು ತಂಡಕ್ಕೆ ಇಂದು ಬಿಳ್ಕೊಡುಗೆ ಸಮಾರಂಭ ನಡೆಯಲಿದೆ.ಮೂರನೇ ಬಾರಿಗೆ ಕ್ಯಾಪ್ಟನ್ ಅಭಿಮನ್ಯು ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದು, ಅಭಿಮನ್ಯುಗೆ ದಸರಾ ಮೆರವಣಿಗೆಯಲ್ಲಿ 9 ಆನೆಗಳು ಸಾಥ್ ನೀಡಿದ್ದವು.ಎರಡು ತಿಂಗಳ ಹಿಂದೆ ಅರಮನೆಗೆ ಗಜಪಡೆ ಬಂದಿದ್ದವು.
ಇಂದು ಬೆಳಿಗ್ಗೆ 11ಕ್ಕೆ ಗಜಪಡೆಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ವತಿಯಿಂದ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಲಾಯ್ತು. ನಾಡಿನಿಂದ ಮತ್ತೆ ಕಾಡಿಗೆ ಗಜಪಡೆ ಇಂದು ವಾಪಸ್ ಹೋಗಲಿವೆ.
Kshetra Samachara
07/10/2022 11:40 am