ಮೈಸೂರು: ಯುವ ದಸರಾ ವೇದಿಕೆಯಲ್ಲಿ ನೆನ್ನೆ ಸಂಜೆ ಗಾಯಕಿ ಮಂಗ್ಲಿ ಹಾಡು ಕೇಳಿ ಸ್ವತಃ ತಾವೇ ವೇದಿಕೆಗೆ ಬಂದ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಎಂ ಎಲ್.ಸಿ ಮಂಜೇಗೌಡ ಡ್ಯಾನ್ಸ್ ನೃತ್ಯ ಮಾಡುವ ಮೂಲಕ ಮೂಲಕ ಮಳೆಯಲ್ಲಿ ನೆರೆದಿದ್ದ ಜನಸಮೂಹಕ್ಕೆ ಮನರಂಜನೆ ನೀಡಿದ್ದಾರೆ.
ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡು ಹಾಡುತ್ತಿದ್ದಂತೆ ವೇದಿಕೆಯಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಎಂಎಲ್‌ಸಿ ಸಿ.ಎನ್ ಮಂಜೇಗೌಡ ನೃತ್ಯ ಮಾಡಲು ಪ್ರಾರಂಭಿಸಿದ್ದು ವೇದಿಕೆಯಲ್ಲಿ ಜನಪ್ರತಿನಿಧಿಗಳ ಡ್ಯಾನ್ಸ್ ನೋಡಿ ಜನರು ಜೈಕಾರ ಕೂಗತೊಡಗಿದರು. ಇನ್ನು ಇವರಿಗೆ ಮೇಯರ್ ಶಿವಕುಮಾರ್ ಸೇರಿದಂತೆ ಬಿಜೆಪಿಯ ಕೆಲ ನಾಯಕರು ಸಾಥ್ ನೀಡಿದರು.
PublicNext
03/10/2022 12:54 pm