ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರ: ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಸ್ವಾಗತ

ಮೈಸೂರ: ವಿಶ್ವವಿಖ್ಯಾತ ದಸರಾ ಮಹೋತ್ಸವ -2022 ಮೈಸೂರಿನ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಜನನಿ ಸೇವಾ ಟ್ರಸ್ಟ್ ವತಿಯಿಂದ ದಸರಾಗೆ ಆಗಮಿಸುವ ದೇಶ - ವಿದೇಶ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರನ್ನು ಆತ್ಮೀಯವಾಗಿ ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅರಮನೆ ವರಹ ಗೇಟ್ ಬಳಿ ಪ್ರವಾಸಿಗರಿಗೆ ಗುಲಾಬಿ ಹೂ ನೀಡಿ , ಮೈಸೂರು ಪೇಟಾ ತೊಡಿಸಿ , ವಿಶ್ವವಿಖ್ಯಾತ ನಂಜನಗೂಡು ರಸಬಾಳೆ , ಮೈಸೂರು ಚಿಗುರು ವೀಳ್ಯದೆಲೆ , ಮೈಸೂರು ಪಾಕ್ , ಮೈಸೂರು ಮಲ್ಲಿಗೆ ಹೂ ನೀಡಿ , ಮಹಿಳೆಯರಿಗೆ ಬಳೆ ತೊಡಿಸಿ ಅರತಿ ಎತ್ತಿ ಸುಗಂಧದ್ರವ್ಯದೊಂದಿಗೆ ಸತ್ಕರಿಸಿ ಬರಮಾಡಿಕೊಂಡರು.

ವಿಶ್ರಾಂತ ಕುಲಪತಿ ಡಾ . ಪದ್ಮಶೇಖರ್, ಡಾ.ಕಬ್ದನಾಲೆ ವಸಂತ ಭಾರದ್ವಾಜಿ,ಸೇರಿದಂತೆ ಇನ್ನೂ ಹಲವರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Edited By : Manjunath H D
PublicNext

PublicNext

26/09/2022 03:38 pm

Cinque Terre

17.4 K

Cinque Terre

0

ಸಂಬಂಧಿತ ಸುದ್ದಿ