ಮೈಸೂರು : ಮೈಸೂರು ದಸರಾ ಗಜಪಡೆಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಗಿದ್ದು, ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗಿದೆ.
ಮೈಸೂರು ಅರಮನೆಯ ಆನೆ ಶಿಬಿರದಲ್ಲಿ ಪೂಜೆ ನೆರವೇರಿದ್ದು, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಡಿಎಫ್ ಒ ಕರಿಕಾಳನ್ ಅವರಿಂದ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಮಾಡಲಾಗಿದೆ. ಸಾಲು ಸಾಲಾಗಿ ನಿಂತ ಗಜಪಡೆ ನೋಡಲು ಜನ ಮುಗಿಬಿದ್ದಿದ್ದಾರೆ.
ದಸರಾ ಆನೆಗಳಿಗೆ ಹೂವಿನ ಅಲಂಕಾರ ಮಾಡಲಾಗಿದ್ದು, ಸಾಂಪ್ರದಾಯಿಕ ಪೂಜೆ ನಂತರ ಆನೆಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬಸ್ಥರಿಗೆ ಕಿಟ್, ಬ್ಯಾಗ್ ಸೇರಿದಂತೆ ಕೆಲವು ವಸ್ತುಗಳ ವಿತರಿಸಲಾಯಿತು.
PublicNext
07/10/2022 03:22 pm