ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ರೈತ ದಸರಾ ಮತ್ತಷ್ಟು ಮೆರಗು ನೀಡಿದೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಇಲ್ಲಿಂದಲೇ ರೈತ ದಸರಾ ಮೆರವಣಿಗೆ ಸಾಗಿದೆ.
ಕೃಷಿ ಸಚಿವ ಚಲುವರಾಯ ಸ್ವಾಮಿಯವ್ರು ನಂದಿ ಧ್ವಜ ಸ್ಥಂಭಕ್ಕೆ ಪೂಜೆ ಸಲ್ಲಿಸಿ ರೈತ ದಸರೆಗೆ ಚಾಲನೆ ನೀಡಿದ್ರು. ಬಳಿಕ ರೈತ ದಸರಾದಲ್ಲಿ ಎತ್ತಿನ ಗಾಡಿ ಓಡಿಸಿ ಸಚಿವರು ಖುಷಿ ಪಟ್ರು. ಇದೇವೇಳೆ ಹಳ್ಳಿಕಾರ್ ಜೋಡೆತ್ತುಗಳು, ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು ನೋಡುಗರ ಕಣ್ಮನ ಸೆಳೆಯಿತು. ಈ ಮಧ್ಯೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕೃಷಿ ಇಲಾಖೆಗಿಂತ ಬೇರೆ ಖಾತೆ ಬೇಡ. ರೈತರಿಗೆ ಬೇಕಾದ ನೆರವು ಬಡ್ಡಿ ರಹಿತ ಸಾಲ ಎಲ್ಲವು ಅನುಕೂಲ ಇದೆ ಎಂದರು.
PublicNext
05/10/2024 06:10 pm