", "articleSection": "Cultural Activity,Accident", "image": { "@type": "ImageObject", "url": "https://prod.cdn.publicnext.com/s3fs-public/286525-1736595978-WhatsApp-Image-2025-01-11-at-5.15.36-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು : ದಕ್ಷಿಣಕಾಶಿ ನಂಜನಗೂಡಿನಲ್ಲಿ ಪ್ರತಿ ವರ್ಷ ಆಚರಿಸುವ ಅಂಧಕಾಸುರ ಸಂಹಾರ ಆಚರಣೆ ಮತ್ತೆ ಅಪಸ್ವರ ಬಂದಿದೆ. ನಂಜನಗೂಡು ನಗರದ ತಾಲ್ಲ...Read more" } ", "keywords": "Andhakaasura Sanhaara, Kannada Movie, New Movie Release, Sandalwood Film, Mythological Movie, Andhakasura, Indian Cinema, Kannada Cinema, Movie Updates, Film News.,Mysore,Cultural-Activity,Accident", "url": "https://publicnext.com/article/nid/Mysore/Cultural-Activity/Accident" }
ನಂಜನಗೂಡು : ದಕ್ಷಿಣಕಾಶಿ ನಂಜನಗೂಡಿನಲ್ಲಿ ಪ್ರತಿ ವರ್ಷ ಆಚರಿಸುವ ಅಂಧಕಾಸುರ ಸಂಹಾರ ಆಚರಣೆ ಮತ್ತೆ ಅಪಸ್ವರ ಬಂದಿದೆ.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಡಿವೈಎಸ್ ಪಿ ರಘು ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಆಚರಣೆಯಲ್ಲಿ ಮಾರ್ಪಾಡು ತರುವಂತೆ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಆದ್ರೆ ಯುವ ಬ್ರಿಗೇಡ್ ದಲಿತ ಸಂಘಟನೆಗಳ ಆಗ್ರಹವನ್ನು ತಿರಸ್ಕರಿಸಿದೆ.
ಈ ಮಧ್ಯೆ ಆಕ್ಷೇಪಕ್ಕೆ ಕಾರಣವಾದ ಅಂಧಕಾಸುರನ ಚಿತ್ರಪಟವನ್ನ ಬದಲಾಯಿಸಿ ತಾಲ್ಲೂಕು ಆಡಳಿತ ಬಿಡುಗಡೆ ಮಾಡಿದೆ. ಇದರಲ್ಲೂ ದಲಿತ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೆನ್ನೆ ಸಂಜೆ ನಡೆದ ಶಾಂತಿ ಸಭೆ ಗೊಂದಲದಲ್ಲೇ ಮುಗಿದಿದೆ.
ಜ.12 ರಂದು ನಾಳೆ ನಡೆಯಲಿರುವ ಅಂದಾಕಾಸುರ ಸಂಹಾರದ ಧಾರ್ಮಿಕ ಕಾರ್ಯಕ್ರಮ ನಂಜನಗೂಡಿನಲ್ಲಿ ನಡೆಯಲಿದೆ. ಕಳೆದ ವರ್ಷ ನಂಜನಗೂಡಿನಲ್ಲಿ ಅಂದಾಕಾಸುರ ಸಂಹಾರದ ವೇಳೆ ಮಹಿಷಾಸುರನ ಭಾವಚಿತ್ರ ಹೋಲುವಂತೆ ಅಂಧಕಾರನ ಚಿತ್ರ ಬಿಡಿಸಿದ ಹಿನ್ನಲೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಕಳೆದ ವರ್ಷ ಅಂದಾಕಾಸುರ ಸಂಹಾರದ ವೇಳೆ ಮಹಿಷಾಸುರನ ಚಿತ್ರ ಹೋಲುವ ಪಟ ಹಾಕಿದ್ದರೆಂದು ಆರೋಪಿಸಿ ಈ ವೇಳೆ ನಂಜುಂಡೇಶ್ವರನ ವಿಗ್ರಹದ ಮೇಲೆ ನೀರು ಎರಚಿ ಅಪಮಾನಿಸಿದ ಘಟನೆ ನಡೆದಿತ್ತು. ಅಂಧಕಾಸುರನ ವರ್ಣನೆಗೆ ತಕ್ಕಹಾಗೆ ನೂತನ ಚಿತ್ರ ಪಟವನ್ನು ತಹಶೀಲ್ದಾರ್, ಹಾಗೂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿಡುಗಡೆ ಮಾಡಿದರು.
ಅಂಧಕಾಸುರನ ಸಂಹಾರ ಕಾರ್ಯಕ್ರಮಕ್ಕೆ ಕೇವಲ ಒಂದು ದಿನ ಇದೆ. ಉಭಯ ತಂಡಗಳ ನಿರ್ಧಾರ ತಾಲ್ಲೂಕು ಆಡಳಿತಕ್ಕೆ ತಲೆನೋವು ತಂದಿದೆ. ಒಟ್ಟಾರೆ ಅಂಧಕಾಸುರನ ಸಂಹಾರ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.
PublicNext
11/01/2025 05:18 pm