ಬೆಂಗಳೂರು: ನಾನಾ ಜಿಲ್ಲೆಗಳಿಂದ ಆಗಮಿಸಿದ ದಂಪತಿ ಮುಂಜಾನೆಯ ತುಂತುರು ಮಳೆಯಲ್ಲೂ ತಮ್ಮ ವಿವಿಧ ಪ್ರಕಾರದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ನೆರೆದಿದ್ದಂತಹ ಜನರ ಕಣ್ಮನ ಸೆಳೆದರು.
ಇಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ರಂಗಚಾರ್ಲು ಪುರಭವನದ ಆವರಣದಲ್ಲಿ (ಟೌನ್ ಹಾಲ್) ನಡೆದ ಪಾರಂಪರಿಕ ಉಡುಗೆಯಲ್ಲಿ ದಂಪತಿ ಟಾಂಗಾ ಸವಾರಿಯನ್ನು ಜೋಡಿಗಳಿಗೆ ಬಾಗಿನ ಕೊಡುವ ಮೂಲಕ ಪ್ರಾರಂಭಿಸಲಾಯಿತು.
40 ಕ್ಕಿಂತ ಅಧಿಕ ಜೋಡಿಗಳು ಭಾಗಿ
ಟಾಂಗಾ ಸವಾರಿಯಲ್ಲಿ ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ನೋಂದಾಯಿತ ದಂಪತಿಗಳು ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯ ಮೂಲಕ ಕಣ್ಮನ ಸೆಳೆದ ಕೊಡಗು. ಮೈಸೂರಿನ ಪಾರಂಪಾರಿಕ ಉಡುಗೆ ತೊಟ್ಟ ದಂಪತಿಗಳು, ಮೈಸೂರು ಪೇಠ ರೇಷ್ಮೆ ಸೀರೆ ತೊಟ್ಟ ದಂಪತಿ ಹಾಗೂ ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನ ಜೋಡಿಗಳು ಭಾಗಿಯಾಗಿ ಜನರ ಗಮನವನ್ನು ತಮ್ಮತ್ತ ಸೆಳೆದುಕೊಂಡರು. 25 ಟಾಂಗಾ ಗಾಡಿಗಳಲ್ಲಿ ದಂಪತಿಗೆ ನಗರದ ಐತಿಹಾಸಿಕ ರಸ್ತೆಗಳಲ್ಲಿ ಟಾಂಗಾ ಸವಾರಿಯನ್ನು ನೋಡಿ ಜನರು ಕಣ್ತುಂಬಿ ಕೊಂಡರು.
Kshetra Samachara
05/10/2024 11:46 am