ಮೈಸೂರು: ಮೈಸೂರು ಹಿಲ್ಲೆಯ ಭುಗತಗಳ್ಳಿ ಪ್ರಸಿದ್ದ ಶ್ರೀ ಬೇತಾಳೇಶ್ವರಿ ದೇವಾಲಯದಲ್ಲಿ ನಿನ್ನೆ ತಡರಾತ್ರಿ ಕಳ್ಳನೋರ್ವ ಹುಂಡಿ ಹಣ ದೋಚಿ ಪರಾರಿಯಾಗಿರುವ ಘಟನೆ ನೆಡೆದಿದೆ.
ನಿನ್ನೆ ತಡರಾತ್ರಿ 2.30ರ ಸುಮಾರಿಗೆ ದೇವಾಲಯದ ಪ್ರವೇಶಿಸಿರುವ ವ್ಯಕ್ತಿ ಹುಂಡಿ ಒಡೆದು ಎರಡು ಬ್ಯಾಗ್‌ಗಳಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾನೆ. ಈ ಎಲ್ಲಾ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮೈಸೂರು ದಕ್ಷಿಣ ವಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
07/10/2022 06:28 pm