ಮೈಸೂರು: ಪೌರ ಕಾರ್ಮಿಕರಿಗೆ ಬಾಯಿಗೆ ಬಂದಹಾಗೇ ಮಾತಾಡಿ ನಿಂದಿಸಿದ ವ್ಯಕ್ತಿಯ ವಿರುದ್ಧ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ ಘಟನೆ ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದಿದೆ.
ಬನ್ನೂರಿನ ಲಕ್ಷ್ಮಿನಾರಾಯಣ್ ಎಂಬಾತ ಪೌರಕಾರ್ಮಿಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ .ಅಷ್ಟೇ ಅಲ್ಲದೆ ಜಾತಿ ನಿಂದನೆ ಮಾತುಗಳನಾಡಿದ್ದಾರೆ. ಸದ್ಯ ಲಕ್ಷ್ಮಿ ನಾರಾಯಣ್ ಹೇಳಿಕೆ ಖಂಡಿಸಿ ಪೌರಕಾರ್ಮಿಕರು ಪ್ರತಿಭಟನೆ ನಡೆಸ್ತಿದ್ದಾರೆ. ಲಕ್ಷ್ಮೀ ನಾರಾಯಣ್ ವಿರುದ್ಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದಾರೆ.
Kshetra Samachara
10/09/2022 03:56 pm