ಮೈಸೂರು : ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿ; ಕಂಗಾಲಾದ ಪತ್ನಿಯಿಂದ ಗಂಡನ ಮನೆಯವರ ವಿರುದ್ಧ
ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪತಿ ಸೇರಿ 16 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹೌದು ! ಚಿತ್ರದುರ್ಗದ 24 ವರ್ಷದ ಅಶ್ವಿನಿ, ಹುಣಸೂರಿನ ಮರೂರು ಗ್ರಾಮದ ಅಭಿಷೇಕ್ ಪ್ರೀತಿಸಿ ಕಳೆದ ವರ್ಷ ಮದುವೆಯಾಗಿ ಜೀವನ ಸಾಗಿಸುತ್ತಿದ್ದರು.
ಇತ್ತೀಚೆಗೆ ಅಶ್ವಿನಿಗೆ ಅಭಿಷೇಕ್ ಕೈ ಕೊಟ್ಟಿದ್ದು, ಅತಂತ್ರಳಾದ ಅಶ್ವಿನಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಭಿಷೇಕ್ ಮನೆಯವರಿಂದಲೇ ಸಮಸ್ಯೆ ಎದುರಾಗಿದೆ ಎಂದು ಅಶ್ವಿನಿ ಆರೋಪಿಸಿದ್ದು, ಅಭಿಷೇಕ್ ಹಾಗೂ ಆತನ ಕುಟುಂಬದ 16 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
PublicNext
24/09/2022 03:14 pm