ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಪುನೀತ್​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ದಸರಾ ಸಿನಿಮೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ

ಮೈಸೂರು: ದಸರಾ ಸಿನಿಮೋತ್ಸವವನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಉದ್ಘಾಟಿಸಿದ್ದಾರೆ. ಅಪ್ಪು ನಟನೆಯ ಹಲವು ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

ಪುನೀತ್​ ರಾಜ್​ಕುಮಾರ್​ ಅವರನ್ನು ಹಲವು ರೀತಿಯಲ್ಲಿ ಸ್ಮರಿಸಲಾಗುತ್ತಿದೆ. ದಸರಾ ಪ್ರಯುಕ್ತ ಮೈಸೂರಿನಲ್ಲಿ ಸಿನಿಮೋತ್ಸವ ನಡೆಯುತ್ತಿದೆ. ಇದರಲ್ಲಿ ಪುನೀತ್​ ನಟನೆಯ ಹಲವು ಸಿನಿಮಾಗಳು ಪ್ರದರ್ಶನ ಆಗಲಿವೆ. ಈ ಸಿನಿಮೋತ್ಸವನನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್​ರವರು ಉದ್ಘಾಟಿಸಿದ್ದಾರೆ. ಪುನೀತ್​ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಿನಿಮೋತ್ಸವಕ್ಕೆ ಅಶ್ವಿನಿ ಚಾಲನೆ ನೀಡಿದರು. ಈ ವೇಳೆ ಸಚಿವ ಎಸ್​.ಟಿ. ಸೋಮಶೇಖರ್​ ಕೂಡ ಜೊತೆಗಿದ್ದರು.

ಈ ಚಿತ್ರೋತ್ಸವದಲ್ಲಿ ವಿವಿಧ ಭಾಷೆ ಮತ್ತು ದೇಶಗಳ ಅನೇಕ ಸಿನಿಮಾಗಳು ಪ್ರದರ್ಶನ ಆಗಲಿವೆ. ನಟ ಸಂಚಾರಿ ವಿಜಯ್​ ಅವರಿಗೂ ಚಿತ್ರೋತ್ಸವದ ಮೂಲಕ ಗೌರವ ಸಲ್ಲಿಸಲಾಗುತ್ತಿದೆ.

Edited By : Somashekar
PublicNext

PublicNext

28/09/2022 07:56 pm

Cinque Terre

33.43 K

Cinque Terre

0