ಮೈಸೂರು: ಮಹಾರಾಜ ಮೈದಾನದಲ್ಲಿ ಇಂದಿನಿಂದ ಯುವ ದಸರಾ ಆರಂಭವಾಗಲಿದ್ದು, ಮೊದಲ ದಿನವೇ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದೆ. ಈ ಹಿನ್ನಲೆಯಲ್ಲಿ ಯುವ ದಸರಾ ವೇದಿಕೆಯ ಮುಂಭಾಗ ಅಪ್ಪುವಿನ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ.
ಅಪ್ಪು ಡ್ಯಾನ್ಸ್ ಮಾಡುವ ಭಂಗಿಯಲ್ಲಿರುವ ಬೃಹತ್ ಕಟೌಟ್ ಅನ್ನು ಅಭಿಮಾನಿ, ಕಲಾವಿದ ಶ್ರೀರಂಗ ರಚಿಸಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನ ಕಟೌಟ್ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇಂದು ಅಪ್ಪು ನಮನ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಬರುತ್ತಿದ್ದೇವೆ ಎಂದು ಅಪ್ಪು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
PublicNext
28/09/2022 11:46 am