ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆ ರಸ್ತೆ ಅಗಲಗೊಳಿಸುವ ಕಾಮಗಾರಿಯ ನಿಮಿತ್ತ ರಸ್ತೆ ಬದಿ ಇರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರಣದಿಂದಾಗಿ ಬಂಟ್ವಾಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬಂಟ್ವಾಳ ಫೀಡರಿನಿಂದ ವಿದ್ಯುತ್ ಸಂಪರ್ಕ ಹೊಂದಿರುವ ಜಕ್ರಿಬೆಟ್ಟು, ಮಣಿಹಳ್ಳ, ಪಣೆಕಳಪಡ್ಪು ಮತ್ತು ಮಣಿ ಪ್ರದೇಶ ಹಾಗೂ 11 ಕೆವಿ ಸಿದ್ಧಕಟ್ಟೆ ಫೀಡರ್ ನಿಂದ ವಿದ್ಯುತ್ ಸಂಪರ್ಕ ಹೊಂದಿರುವ ನಾವೂರು, ಮೂಡನಡುಗೋಡು, ಸರಪಾಡಿ ಹಾಗೂ ಪಂಜಿಕಲ್ಲು ಗ್ರಾಮಗಳ ಕೆಲವು ಪ್ರದೇಶಗಳಿಗೆ ಜ. 2ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
01/01/2021 03:29 pm