ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆ ಕೆಮ್ರಾಲ್ ಸಹಯೋಗದಲ್ಲಿ ಮುಲ್ಕಿ ಹೋಬಳಿ ಮಟ್ಟದ ಖೋ ಖೋ ಪಂದ್ಯಾಟಕ್ಕೆ ಗುರುವಾರ ಬೆಳಗ್ಗೆ ಚಾಲನೆ ನೀಡಲಾಯಿತು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷ ದೇವರಾಜ್ ಪಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಮಾತನಾಡಿ ಕ್ರೀಡೆಯ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅರಳಿಸುವುದರ ಜೊತೆಗೆ ಒಗ್ಗಟ್ಟು ಮೂಡಿಸಲು ಸಾಧ್ಯ ಎಂದರು.
ಕೆಮ್ರಾಲ್ ಗ್ರಾಪಂ ಉಪಾಧ್ಯಕ್ಷ ಸುರೇಶ್ ಪಂಜ, ಜಿ ಪಂ ಮಾಜೀ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಮಂಡಲ ಪ್ರಧಾನ ಬಾಲಾದಿತ್ಯ ಆಳ್ವ, ಮಾಜೀ ತಾ.ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಚಾಮುಂಡೇಶ್ವರಿ ಸಮಿತಿ ಅಧ್ಯಕ್ಷ ಸೀತಾರಾಮ್ ಅಮೀನ್, ಶ್ರೀಹರಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್, ಉದ್ಯಮಿ ಧನಂಜಯ ಶೆಟ್ಟಿಗಾರ್, ಸಿ ಆರ್ ಪಿ ಪಡುಪಣಂಬೂರು ಜ್ಯೋತಿ, ಸಿ ಆರ್ ಆರ್ ಪದ್ಮನಾಭ ಉಲ್ಲಂಜೆ, ರಾಮದಾಸ್ ಭಟ್ ಉಪಸ್ಥಿತರಿದ್ದರು. ಶರ್ಲಿ ಸುಮಾಲಿನಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಧ್ಯಾಯ ಅಜ್ಜಯ್ಯ ಸ್ವಾಗತಿಸಿ ಡೇವಿಡ್ ಧರ್ಮಪಾಲ್ ವಂದಿಸಿದರು. ಬಳಿಕ ಕ್ರೀಡಾಕೂಟ ನಡೆಯಿತು.
Kshetra Samachara
11/08/2022 04:35 pm