ಮುಲ್ಕಿ: ಮಂಗಳೂರು ಉತ್ತರ ವಲಯದ ತಾಲೂಕು ಮಟ್ಟದ 2022_23ನೇ ಸಾಲಿನ ಕರಾಟೆ ಪಂದ್ಯಾಟ ಕಾರ್ನಾಡ್ ಸಿ ಎಸ್ ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ಆತ್ಮ ರಕ್ಷಣೆಗೆ ಕರಾಟೆ ಮುಖ್ಯವಾಗಿದ್ದು ನಮ್ಮನ್ನು ಸಮಾಜ ಗುರುತಿಸುವ ನಿಟ್ಟಿನಲ್ಲಿ ಕ್ರೀಡಾ ಸ್ಪೂರ್ತಿಯ ಮೂಲಕ ಪಂದ್ಯಾಟದಲ್ಲಿ ಭಾಗವಹಿಸಿ ಮಾದರಿಯಾಗಬೇಕು ಎಂದರು.
ಅಧ್ಯಕ್ಷತೆಯನ್ನು ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ಮಂಗಳೂರು ಉತ್ತರ ವಲಯ ದೈಹಿಕ ಶಿಕ್ಷಣಾಧಿಕಾರಿ ಭರತ್ ಕೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕರಾಟೆ ಶಿಕ್ಷಕ ಈಶ್ವರ ಕಟೀಲು, ಸುರತ್ಕಲ್ ಏನ್ ಐ ಟಿ ಕೆ ಕಾಲೇಜಿನ ಪ್ರೊಫೆಸರ್ ಡಾ. ಮರ್ವಿನ್ ಹರ್ಬರ್ಟ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ದೇವಿದಾಸ್ ಶೆಟ್ಟಿ, ಮುಲ್ಕಿ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷೆ ನೀರಜಾಕ್ಷಿ ಅಗರ್ ವಾಲ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರೆ. ಸ್ಟೀವನ್ ಸರ್ವೋತ್ತಮ, ಶಿಕ್ಷಕರಕ್ಷಕರ ಸಂಘದ ಸಂತೋಷ್ ಕರ್ಕೇರ, ಸಂಚಾಲಕ ರಂಜನ್ ಜತ್ತನ್ನ, ಮುಖ್ಯೋಪಾಧ್ಯಾಯಿನಿ ಝೀಠಾ ಮೆಂಡೋನ್ಸಾ, ಯು ಬಿ ಎಂ ಸಿ ಶಾಲೆಯ ಪ್ರೀತಿ ಸುನಿತಾ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ನಿಶಾ , ಪ್ರತೀಕ್ಷಾ ನಿರೂಪಿಸಿದರು. ಬಳಿಕ ಕರಾಟೆ ಪಂದ್ಯಾಟ ನಡೆಯಿತು.
Kshetra Samachara
15/07/2022 11:17 am