ಮುಲ್ಕಿ: ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಶ್ರೀ ನಾರಾಯಣ ಗುರು ಸೇವಾ ದಳದ ಸಂಯುಕ್ತ ಆಶ್ರಯದಲ್ಲಿ ಮುಲ್ಕಿ ವಿಜಯ ಕಾಲೇಜು ಮ್ಯೆದಾನದಲ್ಲಿ ಸಂಘದ ವ್ಯಾಪ್ತಿಯ ಸಮಾಜ ಬಾಂಧವರಿಗೆ ನಡೆದ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಕೊಳಚಿಕಂಬಳ ಗ್ರಾಮ ತಂಡವು ಕಿಲ್ಪಾಡಿ ಗ್ರಾಮ ತಂಡವನ್ನು ಸೋಲಿಸಿ "ಶ್ರೀ ನಾರಾಯಣ ಗುರು ಟ್ರೋಫಿ-2022" ಹಾಗೂ ನಗದನ್ನು ಪಡೆಯಿತು
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಾರಾಯಣಗುರು ಸೇವಾದಳದ ದಳಪತಿ ಸತೀಶ್ ಕಿಲ್ಪಾಡಿ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮಹೇಶ ಅಮೀನ್, ಕೊಲಕಾಡಿ ಜನಸೇವಾ ಪರಿಷತ್ತಿನ ಅಧ್ಯಕ್ಷ ಅನಿಲ್ , ಬಿರುವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು,ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ ಅಮೀನ್, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಬಡಗಿತ್ಲು, ಉಪ ದಳಪತಿ ಕಿಶೋರ್ ಅಂಚನ್, ಜೊತೆ ಕಾರ್ಯದರ್ಶಿ ನರಸಿಂಹ ಪೂಜಾರಿ, ಕಾರ್ಯದರ್ಶಿ ಪ್ರವೀಣ್ ಕೋಟ್ಯಾನ್, ತಾರಾನಾಥ್, ರಮಾನಾಥ ಸುವರ್ಣ ಮತ್ತಿತರರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.
ಅಂತಿಮ ಪಂದ್ಯದ ಪಂದ್ಯಶ್ರೇಷ್ಠ ನಾಗಿ ಗುರು ಕೊಳಚಿಕಂಬಳ, ಉತ್ತಮ ಎಸೆತಗಾರನಾಗಿ ದೀಕ್ಷಿತ್ ಉತ್ತಮ ದಾಂಡಿಗನಾಗಿ ಪ್ರೀತಮ್ ಕಿಲ್ಪಾಡಿ ಬಹುಮಾನ ಪಡೆದುಕೊಂಡರು. ಮೋಹನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
Kshetra Samachara
16/05/2022 04:07 pm