ಮುಲ್ಕಿ: ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಶ್ರೀ ನಾರಾಯಣ ಗುರು ಸೇವಾ ದಳದ ಸಂಯುಕ್ತ ಆಶ್ರಯದಲ್ಲಿ ಮುಲ್ಕಿ ವಿಜಯ ಕಾಲೇಜು ಮ್ಯೆದಾನದಲ್ಲಿ ಸಂಘದ ವ್ಯಾಪ್ತಿಯ ಸಮಾಜ ಬಾಂಧವರಿಗೆ "ಶ್ರೀ ನಾರಾಯಣ ಗುರು ಟ್ರೋಫಿ-2022"ಕ್ರಿಕೆಟ್ ಪಂದ್ಯಾಟ ನಡೆಯಿತುಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಅತಿಕಾರಿಬೆಟ್ಟು ಗ್ರಾ ಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರ್ ಕಲ್ ವಹಿಸಿ ಮಾತನಾಡಿ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಏಳಿಗೆಗೆ ಶ್ರಮಿಸು ವುದರ ಜೊತೆಗೆ ಸಂಘಟನೆ ಬಲಪಡಿಸಬೇಕು ಎಂದರು.
ಮುಲ್ಕಿ ಬಿಲ್ಲವ ಸಂಘದ ಮುಂಬ್ಯೆ ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸುದೇವ ಎಂ ಸಾಲ್ಯಾನ್,ಮುಲ್ಕಿ ನ ಪಂ ಉಪಾಧ್ಯಕ್ಷ ಸತೀಶ್ ಅಂಚನ್, ದಳಪತಿ ಸತೀಶ್ ಕಿಲ್ಪಾಡಿ, ಡಾ.ಹರಿಶ್ಚಂದ್ರ ಸಾಲ್ಯಾನ್,ಉದ್ಯಮಿ ವಾಸು ಪೂಜಾರಿ ಕೊಲಕಾಡಿ ಕೋಶಾಧಿಕಾರಿ ಪ್ರಕಾಶ್ ಸುವರ್ಣ, ಕಾರ್ಯದರ್ಶಿ ಪ್ರವೀಣ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಮೇಶ್ ಮಾನಂಪಾಡಿ ಧನ್ಯವಾದ ಅರ್ಪಿಸಿದರು.
ಮೋಹನ್ ಸುವರ್ಣ,ಶ್ರೀಶ ಐಕಳ ನಿರೂಪಿಸಿದರು, ಬಳಿಕ ಕ್ರಿಕೆಟ್ ಪಂದ್ಯಾಟ ನಡೆಯಿತು.
Kshetra Samachara
15/05/2022 10:40 am