ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಣಂಬೂರು: ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿ೦ಟನ್ ಪಂದ್ಯಾಟ -2022 ಉದ್ಘಾಟನೆ

ಪಣಂಬೂರು: ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ(ರಿ.) 7 ನೇ ವಿಭಾಗ ಕೃಷ್ಣಾಪುರ ಆಶ್ರಯದಲ್ಲಿ ಸಭಾಭವನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಪ್ರಯುಕ್ತ ವಿಶ್ವಕರ್ಮ ಸಮಾಜ ಭಾಂದವರಿಗಾಗಿ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿ೦ಟನ್ ಪಂದ್ಯಾಟ -2022 ಮಂಗಳೂರು ಪಳ್ನೀರಿನ ಫರ್ಫೆಕ್ಟ್ ಪಾಸ್ ಒಳಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ಆಡಳಿತ ಮೊಕ್ತೇಸರರಾದ ಕೆ.ಕೇಶವ ಆಚಾರ್ಯ ನೆರವೇರಿಸಿ ಮಾತನಾಡಿ ದೈಹಿಕ ಸಧೃಡತೆ, ದಿನನಿತ್ಯದ ಅಭ್ಯಾಸವನ್ನು ಮಾಡಿಕೊಂಡಾಗ ಮಾತ್ರವೇ ಕ್ರೀಡೆಯಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಣಂಬೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಭವಾನಿ ಶಂಕರ್ ಆಚಾರ್ಯ ವಹಿಸಿದ್ದರು‌. ಕಾರ್ಯಕ್ರಮದಲ್ಲಿ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಶಿಲ್ಪಿ ಆನಂದ ಆಚಾರ್ಯ, ಗೌರವಾಧ್ಯಕ್ಷ ಪಿ.ಕೆ ದಾಮೋದರ ಆಚಾರ್ಯ, ಮಂಗಳೂರು ಶ್ರೀ ಕಾಳಿಕಾಂಬ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಮ್ ಡಿ, ಸ್ವರ್ಣ ಉದ್ಯಮಿ ಕೆ.ಎ ಚಂದ್ರಶೇಖರ್ ಆಚಾರ್ಯ ಬಜ್ಪೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಂಗಳೂರು ಎಸ್. ಕೆ ಗೋಲ್ಡ್ ಸ್ಮಿತ್ ಇ೦ಡಸ್ಟ್ರಿಯಲ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ, ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ, ದ‌ಕ ಜಿಲ್ಲಾ ಚಿನ್ನದ ಕೆಲಸಗಾರ ಸಂಘದ ಅಧ್ಯಕ್ಷ ಕೆ.ಎಲ್ ಹರೀಶ್, ಶಕ್ತಿನಗರ ಮಧುರ ಕ್ಯಾಟರಿಂಗ್ ಮಾಲಕ ದಿನೇಶ್ ಟಿ, ಉದ್ಯಮಿ ವಿವೇಕ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಹರೀಶ್ ಆಚಾರ್ಯ ಕಾಟಿಪಳ್ಳ, ಅಶೋಕ್ ಆಚಾರ್ಯ ಕೃಷ್ಣಾಪುರ ಮತ್ತಿತರು ಉಪಸ್ಥಿತರಿದ್ದರು. ಕು. ಪವಿತ್ರಾ ಸ್ವಾಗತಿಸಿದರು. ಸುಧಾಕರ್ ಆಚಾರ್ಯ ಕುತ್ತೆತ್ತೂರು ವಂದಿಸಿದರು. ಸುಧಾ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

ಪುರುಷರ ಬ್ಯಾಡ್ಮಿಂಟನ್ ಪಂದ್ಯಾಟದ ವಿಜೇತರು:

ಮಿಕ್ಸೆಡ್ ಡಬಲ್- ಸುಹಾಗ್, ಸುಕನ್ಯಾ (ಪ್ರಥಮ),ಭರತ್, ದಿಶಾ( ದ್ವಿತೀಯ),ಮಹೇಶ್, ಅತಿಥಿ( ತೃತೀಯ) ಸ್ಥಾನವನ್ನು ಗಳಿಸಿರುತ್ತಾರೆ.

35 ವರ್ಷ ಮೇಲ್ಪಟ್ಟ ವಯೋಮಾನದಲ್ಲಿ ಕಿಶೋರ್, ಭಾಸ್ಕರ್ (ಪ್ರಥಮ), ಶೇಖರ್, ಸಂತೋಷ್( ದ್ವಿತೀಯ), ಕಿರಣ್, ಹರಿಪ್ರಸಾದ್ (ತೃತೀಯ) ಸ್ಥಾನವನ್ನು ಗಳಿಸಿರುತ್ತಾರೆ.

ಎಲ್ಲಾ ವಯೋಮಾನದ ವಿಭಾಗದಲ್ಲಿ ಪುನೀತ್, ಆಶಿಷ್( ಪ್ರಥಮ), ಪ್ರಸಾದ್, ರಾಜ್( ದ್ವಿತೀಯ), ಅನ್ವೇಷ್, ರಿಶಿ( ತೃತೀಯ) ಸ್ಥಾನವನ್ನು ಗಳಿಸಿರುತ್ತಾರೆ.

45ವರ್ಷ ಮೇಲ್ಪಟ್ಟು ವಯೋಮಾನದವರಲ್ಲಿ ಜಯಕರ, ರಮೇಶ್ ( ಪ್ರಥಮ),ಕಿರಣ್, ಹರಿಪ್ರಸಾದ್ (ದ್ವಿತೀಯ) ಸ್ಥಾನವನ್ನು ಗಳಿಸಿರುತ್ತಾರೆ.

Edited By : PublicNext Desk
Kshetra Samachara

Kshetra Samachara

05/05/2022 01:14 pm

Cinque Terre

984

Cinque Terre

0

ಸಂಬಂಧಿತ ಸುದ್ದಿ