ಮುಲ್ಕಿ:ಮುಲ್ಕಿ ಬಂಟರ ಸಂಘದ ಯುವ ವಿಭಾಗದ ವತಿಯಿಂದ ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೀರ್ತಿ ಶೇಷ ಅಮರನಾಥ ಶೆಟ್ಟಿ ಹೆಸರಿನಲ್ಲಿ "ಬಂಟ್ಸ್ ಪ್ರೀಮಿಯರ್ ಲೀಗ್ 2022" ಪಂದ್ಯಾಟವನ್ನು ಶಾಸಕ ಉಮಾನಾಥ ಕೋಟ್ಯಾನ್ ಉಧ್ಟಾಟಿಸಿ ಮಾತನಾಡಿ ಕ್ರೀಡೆಯ ಮೂಲಕ ಸಂಘಟನೆಯಲ್ಲಿ ಒಗ್ಗಟ್ಟು ಮೂಡುವುದರ ಜೊತೆಗೆ ಸಮಾಜದಲ್ಲಿ ಇನ್ನಷ್ಟು ಕಾರ್ಯಸಿದ್ದಿ ಗಳನ್ನು ಮಾಡಲು ಹೆಚ್ಚಿನ ಬಲ ದೊರೆಯುವುದು. ಯುವ ಸಂಘಟನೆ ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಎಂದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಅರಂವಿದ ಪೂಂಜ ನೆರವೇರಿಸಿ ಮಾತನಾಡಿದರು.
ಬಪ್ಪನಾಡು ದೇವಳದ ಆಡಳಿತ ಮುಕ್ತೇಸರ ಮನೋಹರ ಶೆಟ್ಟಿ, ಪ್ರಕಾಶ್ ಶೆಟ್ಟಿ ಕಡಂದಲೆ, ಮಯೂರಿ ಪೌಂಡೇಶನ್ ನ ಜಯ ಶೆಟ್ಟಿ, ಅಮರಶ್ರೀ ಅಮರನಾಥ ಶೆಟ್ಟಿ, ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಸಿ.ಎ ಸದಾಶಿವ ಶೆಟ್ಟಿ, ಕಾಲೇಜು ಪ್ರಾಶುಂಪಾಲ ವಾಸುದೇವ ಬೆಳ್ವೆ, ಸುನೀಲ್ ಅಳ್ವ, ಬಂಟರ ಸಂಘದ ಪದಾಧಿಕಾರಿಗಳಾದ ರಾಜೇಶ್ ಕುಮಾರ್ ಶೆಟ್ಟಿ, ಗಂಗಾಧರ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ದಾಮೋದರ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಪ್ರಚಾರ ವಿಭಾಗದ ನಿಶಾಂತ್ ಶೆಟ್ಟಿ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಸಿ ಎ ಪದವಿ ಪಡೆದ ಶಯನ್ ಶೆಟ್ಟಿ ರವರನ್ನು ಗೌರವಿಸಲಾಯಿತು.
ಸಾಯಿನಾಥ ಶೆಟ್ಟಿ ಪ್ರಸ್ತಾವನೆಗೈದರು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಸ್ವಾಗತಿಸಿ ಶ್ರೀಶ ಸರಪ್ ಐಕಳ ದನ್ಯವಾದ ಸಮರ್ಪಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.
Kshetra Samachara
16/04/2022 10:30 am