ಮುಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಶ್ರೀರಾಮ ಯುವಕ ಸಂಘದ ಕಾರ್ಯವೈಖರಿ ಅಭಿನಂದನೀಯ ವಾಗಿದ್ದು ಕ್ರೀಡೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಂಘಟನೆ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ಉದ್ಯಮಿ ಗಣೇಶ್ ಕಾಮತ್ ಹೇಳಿದರು.
ಕಿನ್ನಿಗೋಳಿಯ ಶ್ರೀರಾಮ ಯುವಕ ವೃಂದ (ರಿ) ಗೋಳಿ ಜೋರಾ ವತಿಯಿಂದ 35ನೇ ವರ್ಷದ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಹಾಗೂ ಸಂಘದ ಸದಸ್ಯರಿಗೆ ಏರ್ಪಡಿಸಲಾದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಂಕರ್ ಮಾಸ್ಟರ್ ಗೋಳಿಜೋರ ಮೋಹಿನಿ ಕಲಾಸಂಪದ ಮುಖ್ಯಸ್ಥರಾದ ಗಂಗಾಧರ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಗೋಳಿ ಜೋರಾ ವೀರಪ್ಪ ಮೇಸ್ತ್ರಿ, ಪ್ರಾರ್ಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ನ ಆರೋಗ್ಯ ಸಹಾಯಕಿ ನಾಗವೇಣಿ ಶ್ರೀಮತಿ ರೇಖಾ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.
ರಾಮ ಯುವಕ ವೃಂದದ ಅಧ್ಯಕ್ಷರಾದ ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 200ಕ್ಕೂ ಅಧಿಕ ಮಂದಿ ಸಾರ್ವಜನಿಕರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
Kshetra Samachara
27/03/2022 10:44 pm