ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧಾ ಕೂಟದಲ್ಲಿ ಜಾನ್ವಿ ಶೆಟ್ಟಿ ಗೆ ಚಿನ್ನದ ಪದಕ

ಕಟೀಲು:ಮೈಸೂರ್ ನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧಾ ಕೂಟದಲ್ಲಿ ಜಾನ್ವಿ ಶೆಟ್ಟಿ ರವರು ಲೈಟ್ ಕಾಂಟ್ಯಾಕ್ಟ್ -28ಕೆ ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ ಹಾಗೂ ಮ್ಯೂಸಿಕಲ್ ಫಾರ್ಮ್ ವಿಭಾಗದಲ್ಲಿ 3 ನೇ ಸ್ಥಾನ ಪಡೆದಿದ್ದಾರೆ.

ಮುಂದಿನ ದಿನಗಳಲ್ಲಿ ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ದಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಜಾನ್ವಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮಾರ್ಷಿಯಲ್ ಆರ್ಟ್ಸ್ ನ ವಿದ್ಯಾರ್ಥಿಯಾಗಿದ್ದು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಮತ್ತು ಶಿಕ್ಷಕರಾದ ಸಂಪತ್ ಕುಮಾರ್ ಹಾಗೂ ಸಹಾಯಕ ಶಿಕ್ಷಕ ಕಾರ್ತಿಕ್ ಆಚಾರ್ಯ ರವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

ಜಾನ್ವಿ ಶೆಟ್ಟಿ ಕಟೀಲು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಕಿರಣ್ ಶೆಟ್ಟಿ ಕಟೀಲು ಹಾಗೂ ಪೂನಮ್ ಶೆಟ್ಟಿ ಬಜ್ಪೆ ರವರ ಪುತ್ರಿ.

Edited By : PublicNext Desk
Kshetra Samachara

Kshetra Samachara

12/11/2021 07:22 pm

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ