ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ಮಂಗಳೂರು ಉತ್ತರ ವಲಯದ ಅಂತರ್ ಕಾಲೇಜು ಹುಡುಗಿಯರ ತ್ರೋಬಾಲ್ ಪಂದ್ಯಾಟದಲ್ಲಿ ಐಕಳ ಪೊಂಪೈ ಕಾಲೇಜು ತಂಡವು ರನ್ನರ್ ಅಫ್ ಪ್ರಶಸ್ತಿ ಪಡೆದುಕೊಂಡಿದೆ.
ಟೂರ್ನಿಯಲ್ಲಿ ಮಂಗಳೂರು ಉತ್ತರ ವಲಯದ 6 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ಪ್ರಥಮ ದರ್ಜೆ ಕಾಲೇಜು ಪ್ರಸ್ಥಾನ ಪಡೆದುಕೊಂದಿದೆ. ಸಮಾರೋಪ ಸಮಾರಂಭದಲ್ಲಿ ಪೊಂಪೈ ಪಿ.ಯು.ಕಾಲೇಜಿನ ಪ್ರಾಂಶುಪಾಲ ಪ್ರೊ.ಮ್ಯಾಥ್ಯುಎನ್, ಎಮ್. ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಪುರುಷೋತ್ತಮ ಕೆ.ವಿ.ಯವರು ವಹಿಸಿದ್ದು ಕಿನ್ನಿಗೋಳಿ ಲಯನ್ಸ್‌ಕ್ಲಬ್‌ನ ಕಾರ್ಯದರ್ಶಿ ಶ್ರೀಮತಿ ಹಿಲ್ಡಾ ಡಿಸೋಜ ಮತ್ತು ವಿಶ್ವವಿದ್ಯಾನಿಲಯದ ಕ್ರೀಡಾ ಪ್ರತಿನಿಧಿಯಾಗಿ ಡಾ.ಜೋನ್ ಪಿಂಟೊ ಉಪಸ್ತಿತರಿದ್ದರು.
Kshetra Samachara
27/02/2021 10:10 pm