ಮಂಗಳೂರು: 'ಕಂಬಳದ ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ ಗೌಡ ಅವರು ಕಿನ್ನಿಗೋಳಿ ಸಮೀಪದ ಐಕಳಬಾವಾದಲ್ಲಿ ಆದಿತ್ಯವಾರ ನಡೆದ ಕಂಬಳದಲ್ಲಿ ಕಳೆದ ಬಾರಿಯ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ!.
ಶ್ರೀನಿವಾಸ ಗೌಡ ಅವರು ಐಕಳಬಾವಾದಲ್ಲಿ ನಡೆದ ಕಂಬಳದಲ್ಲಿ 125 ಮೀಟರ್ ದೂರವನ್ನು 11.64 ಸೆಕೆಂಡ್ ನಲ್ಲಿ ಗುರಿ ಮುಟ್ಟಿದ್ದಾರೆ. ಇದನ್ನು 100 ಮೀಟರ್ ಗೆ ಇಳಿಸಿದರೆ 9.31 ಸೆಕೆಂಡ್ ನಲ್ಲಿ ಕ್ರಮಿಸಿದ್ದಾರೆ. ಈ ಮೂಲಕ ಅವರು ಕಳೆದ ವರ್ಷ ಇದೇ ಐಕಳಬಾವಾದಲ್ಲಿ 100 ಮೀಟರ್ ನ್ನು 9.55 ಸೆಕೆಂಡ್ ನಲ್ಲಿ ಕ್ರಮಿಸಿದ ದಾಖಲೆಯನ್ನು ಮುರಿದಿದ್ದಾರೆ.
ಆದರೆ, ಶನಿವಾರ ಇದೇ ಕಂಬಳದಲ್ಲಿ ಯುವ ಕಂಬಳ ಓಟಗಾರ ವಿಶ್ವನಾಥ ಬೈಂದೂರು ಅವರ ದಾಖಲೆ 9.15 ಸೆಕೆಂಡ್ ನ್ನು ಶ್ರೀನಿವಾಸ ಗೌಡ ಅವರಿಗೆ ಮುರಿಯಲಾಗಲಿಲ್ಲ.
Kshetra Samachara
08/02/2021 06:28 pm