ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್-ಬ್ಯಾಡ್ಮಿಂಟನ್ ಪಂದ್ಯಾವಳಿಯ ಕೊನೆಯ ದಿನವಾದ ಭಾನುವಾರ, ಹೊನಲು ಬೆಳಕಿನ ಕೃತಕ ಹುಲ್ಲು ಹಾಸಿನ ಕೋರ್ಟ್ನಲ್ಲಿ ನಡೆದ ಪಂದ್ಯಾಟದಲ್ಲಿ ಫೈನಲ್ ಪ್ರವೇಶಿಸಿದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳ ಹಣಾಹಣಿಯಲ್ಲಿ ಅತಿಥೇಯ ಕರ್ನಾಟಕ ತಂಡವು 35-22, ೩೫-೨೬ ಸೆಟ್ಗಳಲ್ಲಿ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತು. ಕರ್ನಾಟಕ ತಂಡದ 7 ಕ್ರೀಡಾಪಟುಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು ಎನ್ನುವುದು ಉಲ್ಲೇಖನೀಯ
ಪುರುಷರ ಡಬಲ್ಸ್ ನಲ್ಲಿ ತಮಿಳುನಾಡು ತಂಡವು ಕರ್ನಾಟಕ ತಂಡದ ವಿರುದ್ಧ 35-27, 35-19 ಸೆಟ್ಗಳ ಅಂತರದಲ್ಲಿ ಜಯ ಸಾಧಿಸಿತು. ಮಹಿಳಾ ಡಬಲ್ಸ್ನಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡದ ವಿರುದ್ಧ 35-17, 35-28 ಸೆಟ್ಗಳ ಅಂತರದಲ್ಲಿ ಗೆಲುವು ಪಡೆಯಿತು. ಮಿಕ್ಸ್ಡ್ ಡಬಲ್ಸ್ನಲ್ಲಿ ಆಂಧ್ರಪ್ರದೇಶ ತಂಡವು ಕರ್ನಾಟಕ ತಂಡವನ್ನು 35-31, 35-22 ಅಂತರದಿಂದ ಮಣಿಸಿ ಗೆಲುವಿನ ನಗೆ ಬೀರಿತು.
ಮಹಿಳಾ ವಿಭಾಗ :
ಆಂಧ್ರಪ್ರದೇಶ ತಂಡ ಮಹಾರಾಷ್ಟ್ರ ತಂಡದ ವಿರುದ್ಧ 35-30, 24-35, 35-16 ಅಂತರದಲ್ಲಿ ಜಯ ಸಾಧಿಸಿ ಮೂರನೇ ಸ್ಥಾನ ಪಡೆಯಿತು. ಮಹಾರಾಷ್ಟ್ರ ತಂಡವು ನಾಲ್ಕನೇ ಸ್ಥಾನ ಪಡೆಯಿತು. ಕೇರಳ ತಂಡ ಪುದುಚೆರಿ ತಂಡದ ವಿರುದ್ಧ ಜಯ ಸಾಧಿಸಿ ಕ್ರಮವಾಗಿ 5ನೇ ಹಾಗೂ 6ನೇ ಸ್ಥಾನ ಪಡೆದವು. ಬಿಹಾರ ತಂಡವು ಚತ್ತೀಸ್ಗಢ ವಿರುದ್ಧ ಜಯ ಸಾಧಿಸಿ ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನ ಪಡೆದವು.
ಪುರುಷರ ವಿಭಾಗ :
ಆಂಧ್ರಪ್ರದೇಶ ತಂಡ ತೆಲಂಗಾಣ ವಿರುದ್ಧ 36-34, 35-18 ಅಂತರದಲ್ಲಿ ಜಯ ಸಾಧಿಸಿ ಮೂರನೇ ಸ್ಥಾನ ಪಡೆದರೆ, ತೆಲಂಗಾಣ ತಂಡ ನಾಲ್ಕನೇ ಸ್ಥಾನ ಪಡೆಯಿತು. ತಮಿಳುನಾಡು ತಂಡದ ವಿರುದ್ಧ ಕರ್ನಾಟಕ ತಂಡವು ಜಯ ಸಾಧಿಸಿ 5ನೇ ಸ್ಥಾನ ಪಡೆದರೆ, ತಮಿಳುನಾಡು ತಂಡ 6ನೇ ಸ್ಥಾನ ಗಳಿಸಿತು. ಮಹಾರಾಷ್ಟ್ರ ತಂಡವು ಕೆನರಾ ಬ್ಯಾಂಕ್ ತಂಡದ ವಿರುದ್ಧ ಜಯ ಸಾಧಿಸಿ 7ನೇ ಸ್ಥಾನ ಪಡೆಯಿತು. ಕೆನರಾ ಬ್ಯಾಂಕ್ ತಂಡವು 8ನೇ ಸ್ಥಾನ ಪಡೆಯಿತು.
Kshetra Samachara
06/03/2022 09:47 pm