ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಕಳ: ಕಂಬಳ ವೀಕ್ಷಣೆಗೆ ನೂತನ ಗ್ಯಾಲರಿ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮುಲ್ಕಿ: ಕರಾವಳಿಯ ಜನಪದ ಕ್ರೀಡೆ ಹಾಗೂ ಸಂಸ್ಕೃತಿ ಗಳು ಗ್ರಾಮೀಣ ಜನತೆಯ ಅವಿಭಾಜ್ಯ ಅಂಗವಾಗಿದ್ದು ಪ್ರೋತ್ಸಾಹ ಅಗತ್ಯ ಎಂದು ಕರಾವಳಿ ಪಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಅವರು ಕರಾವಳಿ ಪ್ರಾಧಿಕಾರದ ವತಿಯಿಂದ 10 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ಐಕಳ ಭಾವ ಕಾಂತಬಾರೆ ಬುಧಬಾರೆ ಜೋಡುಕರೆ ಕಂಬಳ ವೀಕ್ಷಣೆಗೆ ನೂತನ ಗ್ಯಾಲರಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಕಂಬಳ ನಮ್ಮ ಸಂಸ್ಕ್ರತಿ ಅದರ ಉಳಿವು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಐಕಳ ಬಾವ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಐಕಳ ಪಂಚಾಯತ್ ಮಾಜೀ ಅಧ್ಯಕ್ಷ ದಿವಾಕರ ಚೌಟ, ಸದಸ್ಯ ದಯೇಶ್, ಕಂಬಳ ಸಮಿತಿಯ ಚಿತ್ತರಂಜನ್ ಭಂಡಾರಿ, ಪ್ರದೀಪ್ ರೈ, ಗುತ್ತಿಗೆದಾರ ಸಂತೋಷ್ ಕುಮಾರ್ ಹೆಗ್ಡೆ, ಲೀಲಾಧರ ಶೆಟ್ಟಿ, ಕೃಷ್ಣ ಮಾರ್ಲ, ಡೋನಿ ಸುವಾರಿ, ಪ್ರಕಾಶ್ ಶೆಟ್ಟಿ ಪಡು ಹಿತ್ಲು, ಸಾಹುಲ್ ಹಮೀದ್, ಶಶಿಧರ್, ನಿರ್ಮಿತಿ ಕೇಂದ್ರದ ಶರತ್, ಪ್ರದೀಪ್ ಡಿಸೋಜ, ಪವನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಭಟ್ ಮತ್ತು ವರುಣ್ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು.

Edited By : Nagaraj Tulugeri
Kshetra Samachara

Kshetra Samachara

11/01/2021 10:32 pm

Cinque Terre

3.27 K

Cinque Terre

0

ಸಂಬಂಧಿತ ಸುದ್ದಿ