ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳ ಡಿ. 27ರಂದು ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಅವರು ಪಡುಪಣಂಬೂರಿನ ಮುಲ್ಕಿ ಅರಮನೆಯಲ್ಲಿ ಕಂಬಳದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಕಂಬಳ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ ಮಾತನಾಡಿ, ಕೊರೊನಾ ನಿಯಮ ಪಾಲಿಸಿಕೊಂಡು ಈ ಬಾರಿ ಕಂಬಳ ನಡೆಸಲಾಗುವುದು. ಕಂಬಳ ಗದ್ದೆಯಲ್ಲಿ ಸಂತೆ, ಅಂಗಡಿಗಳಿಗೆ ಅವಕಾಶ ಇಲ್ಲ. ಕಂಬಳದ ಕರೆಯನ್ನು ಶ್ರಮದಾನದ ಮೂಲಕ ದುರಸ್ತಿ ಪಡಿಸಲು ವಿವಿಧ ಸಂಘಟನೆಗಳು ಮುಂದಾಗಿವೆ ಎಂದರು.
ಕಂಬಳ ಸಮಿತಿ ಪದಾಧಿಕಾರಿಗಳಾದ ಚಂದ್ರಶೇಖರ ಕಾಸಪ್ಪಯ್ಯರ ಮನೆ, ಗೌತಮ್ ಜೈನ್, ನವೀನ್ ಶೆಟ್ಟಿ ಎಡ್ಮೆಮಾರ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ವಿಜಯಕುಮಾರ್ ಕೊಲ್ನಾಡು, ಶಶೀಂದ್ರ ಸಾಲ್ಯಾನ್, ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/12/2020 01:48 pm