ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದ್ಯಪಾಡಿ: ಬ್ರಹ್ಮಕಲಶೋತ್ಸವ ಮತ್ತು ನಾಗಬ್ರಹ್ಮ ಮಂಡಲೋತ್ಸವ - ಸಮಾಲೋಚನಾ ಸಭೆ

ಬಜಪೆ:ಅದ್ಯಪಾಡಿಯ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ನಾಗಬ್ರಹ್ಮ ಮಂಡಲೋತ್ಸವ ಪ್ರಯುಕ್ತ ಪೂರ್ವಭಾವಿ ಸಮಾಲೋಚನಾ ಸಭೆಯು ನಡೆಯಿತು. ಸಮಾಲೋಚನಾ ಸಭೆಯಲ್ಲಿ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಅವರು ಆಶೀರ್ವಚನ ನೀಡಿದರು. ದೇವಳದ ಧರ್ಮದರ್ಶಿ ಮೋನಪ್ಪ ಮೇಸ್ತ್ರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಮುಂಬೈ ಸಾಫಲ್ಯ ಯಾನೆ ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ರಾಯಿ, ಮಾಜಿ ಅಧ್ಯಕ್ಷ ಓಂಪ್ರಕಾಶ್ ರಾವ್, ಮಾಜಿ ಕಾರ್ಯದರ್ಶಿ ಭಾಸ್ಕರ ಅಮೀನ್, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಬಂಟ್ವಾಳ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್.ಮಾವೆ ,

ಪ್ರಮುಖರಾದ ಸಂಜೀವ ಅಡ್ಯಾರು, ಭಾಸ್ಕರ ಎಡಪದವು , ಪದ್ಮನಾಭ ಕಟೀಲು, ವೆಂಕಟೇಶ್ ಕದ್ರಿ, ಪ್ರೇಮಾನಂದ ಸಾಲ್ಯಾನ್, ಮೋಹನ್ ಕೆ.ಶ್ರೀಯಾನ್ ರಾಯಿ, ಡಾ.ರವೀಂದ್ರ ಕಂದಾವರ, ರತಿಕಾ ಶ್ರೀನಿವಾಸ್ ಮುಂಬೈ, ಕೇಶವ ಪೊಳಲಿ, ವಿವೇಕಾನಂದ ವಾಮಂಜೂರು,ದೇವಳದ ಟ್ರಸ್ಟಿ ರಾಜೇಶ್ ಗಾಣಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ತಿಲಕ್ ಶೆಟ್ಟಿ ಪೆರಾರ ಸ್ವಾಗತಿಸಿ, ವಂದಿಸಿದರು.

Edited By : PublicNext Desk
Kshetra Samachara

Kshetra Samachara

10/05/2022 11:28 am

Cinque Terre

1.23 K

Cinque Terre

0

ಸಂಬಂಧಿತ ಸುದ್ದಿ