ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲಿನಲ್ಲಿ ನಾಳೆ ಶ್ರೀ ರಾಮನವಮಿ ಆಚರಣೆಗೆ ಚಾಲನೆ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಾಳೆಯಿಂದ ಎ.10 ರವರೆಗೆ ನಡೆಯಲಿರುವ ಶ್ರೀ ರಾಮೋತ್ಸವದ ಪ್ರಯುಕ್ತ ನಾಳೆ ಸಂಜೆ 5 ಗಂಟೆಗೆ ಸರಸ್ವತೀ ಸದನದಲ್ಲಿ ನಡೆಯಲಿರುವ ಕಾರ‍್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ , ಮೂಲ್ಕಿ - ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಚಿತ್ರನಟ ಗುರುಕಿರಣ್ ಭಾಗವಹಿಸಲಿದ್ದು, ವಿವಿಧ ಕಲಾವಿದರು ರಾಮನ ಕುರಿತಾದ ಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಎ.10 ರಂದು ಸಮಾರೋಪ ದಲ್ಲಿ ರೋಹಿತ್ ಚಕ್ರತೀರ್ಥ ವಿಶೇಷ ಉಪನ್ಯಾಸ ನೀಡಲಿದ್ದಾರೆ. ದಿನಂಪ್ರತಿ ದಿನವಿಡೀ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Edited By : PublicNext Desk
Kshetra Samachara

Kshetra Samachara

01/04/2022 07:59 pm

Cinque Terre

1.56 K

Cinque Terre

0

ಸಂಬಂಧಿತ ಸುದ್ದಿ