ಮುಲ್ಕಿ: ಸಮಾಜದಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಅವರು ಕಥಾ ಬಿಂದು ಪ್ರಕಾಶನದ 14ನೇ ವರ್ಷಾಚರಣೆ ಪ್ರಯುಕ್ತ ಕಥಾ ಬಿಂದು ಸಾಹಿತ್ಯ ಸಾಂಸ್ಕ್ರತಿಕ ವೇದಿಕೆ(ರಿ) ಮತ್ತು ಕಿನ್ನಿಗೋಳಿಯ ಯುಗಪುರುಷದ ಸಹಯೊಗದಲ್ಲಿ ಪಿ ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಶನಿವಾರ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ನಡೆದ ಸಾಹಿತ್ಯಾವಲೋಕನ ಕವಿಗೋಷ್ಠಿ ಚ್ಯೆತನ್ಯ ಶ್ರೀ ಕರುನಾಡ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ,ಕಥಾ ಬಿಂದು ಸಾಹಿತ್ಯ ಮಾಲೆಯ ಪಡುಗಡಲಿನಿಂದ ಹಾಗೂ ಚಿಟಾಣಿ ಚಿಟ್ಟೆ ಕೃತಿಗಳ ಬಿಡುಗಡೆ,ಸ್ನೇಹ ಬುಕ್ ಹೌಸ್ ರವರ ಶ್ರೀ ಮಾತಾ ವ್ಯೆಷ್ಣೋದೇವಿ ಕೃತಿ ಬಿಡುಗಡೆ,ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಕನ್ನಡ ನಾಡು-ನುಡಿಗೆ ಕುತ್ತು ಬಂದಾಗ ಕನ್ನಡಿಗರು ಎದ್ದು ನಿಂತು ಅದನ್ನು ಪ್ರತಿಭಟಿಸಬೇಕು.ಕನ್ನಡಕ್ಕಾಗಿ, ತುಳುವಿಗಾಗಿ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಾಗರಾಜ ಖಾರ್ವಿ ಕಂಚುಗೋಡುಅವರ ಪಡುಗಡಲಿ ನಿಂದ, ಕೆ. ವಿ.ಲಕ್ಷ್ಮಣ ಮೂರ್ತಿಯವರ ಪ್ರವಾಸ ಕಥನದ 8ನೇ ಆವೃತಿ ಬಿಡುಗಡೆಗೊಳಿಸಲಾಯಿತು.
ಶೇಖರ ಅಜೆಕಾರು, ಸಂದೇಶ ಎಚ್.ನಾಯಕ್ ಕೃತಿಗಳ ಅವಲೋಕನ ಮಾಡಿದರು. ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಕಿನ್ನಿಗೋಳಿಯ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಸಾಹಿತಿ ಕೆ. ವಿ. ಲಕ್ಷ್ಮಣ ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು
ರೇಮಂಡ್ ತಾಕೊಡೆ (2021ರ ಮಾಧ್ಯಮಕ್ಷೇತ್ರ), ಡಾ. ಸತೀಶ್‌ಎನ್. ಬಂಗೇರ, ಬಿ.ಎಸ್ಸಿ.ಎಲ್.ಎಲ್.ಬಿ (ಸಮಾಜ ಸೇವೆ), ಸಾಣೂರುಅರುಣ್ ಶೆಟ್ಟಿಗಾರ್ (ಸಮಾಜ ಸೇವೆ), ಕು. ಅನ್ವಿತಾ ವಿಟ್ಲ (ಸ್ಯಾಕ್ಸೊಫೋನ್ ಪ್ರತಿಭೆ), ಮಾ. ಪ್ರೀತಮ್‌ದೇವಾಡಿಗ (ಬಹುಮುಖ ಪ್ರತಿಭೆ), ಕು. ಚಿತ್ರಾಪುರ ಸಾನ್ವೀ ಭಟ್ (ಬಹುಮುಖ ಪ್ರತಿಭೆ), ಕು. ಲಾಲಿತ್ಯಕುಮಾರ್ (ಬಹುಮುಖ ಪ್ರತಿಭೆ), ಮಾ.ಸುನಿ ಎಸ್. ಅಜೆಕಾರು (ಬಹುಮುಖ ಪ್ರತಿಭೆ), ಕು.ನಿರೀಕ್ಷಾ ಶೆಟ್ಟಿ (ಬಹುಮುಖ ಪ್ರತಿಭೆ), ಕು.ಅರ್ಚನಾಎಸ್. ಸಂಪ್ಯಾಡಿ (ಬಹುಮುಖ ಪ್ರತಿಭೆ), ಕು.ಸಾನ್ನಿದ್ಯಆಚಾರ್ಯ ಕವತ್ತಾರು (ಬಾಲ ಪ್ರತಿಭೆ) ರವರಿಗೆ ಚೈತನ್ಯ ಶ್ರೀ ಕರುನಾಡರತ್ನ ಪ್ರಶಸ್ತಿಯನ್ನು ನೀಡಲಾಯಿತು .
ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಕೆ ವಿ ಲಕ್ಷ್ಮಣ ಮೂರ್ತಿ ವಹಿಸಿದ್ದರು. ಡಾ|ಸುರೇಶ್ ನೆಗಳಗುಳಿ,ರವೀಂದ್ರ ಕಿಣಿ,ರಂಜಿತ್ ಸಸಿಹಿತ್ಲು,ದುರ್ಗಾ ಪ್ರಸಾದ್ ದಿವಾಣ ಮತ್ತಿತರ ಕವಿಗಳು ಭಾಗವಹಿಸಿದ್ದರು.ವಾಣಿಶ್ರೀ ಎನ್. ಗುರುರಾಜ್ ಉಪಸ್ತಿತರಿದ್ದರು.
ಕವಯಿತ್ರಿ ಡಾ.ವಾಣಿಶ್ರೀ ಪಡುಗಡಲಿನಿಂದ ಕೃತಿ ಬಿಡುಗಡೆಗೊಳಿಸಿದರು.33 ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು. ಪಿ.ವಿ. ಪ್ರದೀಪ್‌ಕುಮಾರ್ ಪ್ರಸ್ತಾವನೆಗೈದರು, ರಾಣಿ ಪುಷ್ಪಲತಾದೇವಿ ಸ್ವಾಗತಿಸಿದರು. ಗಂಗಾಧರ್ ವಂದಿಸಿದರು.
Kshetra Samachara
12/02/2022 09:56 pm